GST: ಕೇಂದ್ರದಿಂದ GST ಪರಿಷ್ಕರಣೆ – ಇನ್ಮುಂದೆ ಈ ವಸ್ತುಗಳಿಗೆ ನೀವು ಟ್ಯಾಕ್ಸ್ ಕಟ್ಟುವಂತಿಲ್ಲ !!

Share the Article

GST: 2017ರಲ್ಲಿ ಜಿ ಎಸ್ ಟಿ ಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಜಿಎಸ್‌ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4ರಿಂದ 2ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಯಲ್ಲಿ ಇನ್ನು ಮುಂದೆ ದೇಶದ ಜನರು ಈ ವಸ್ತುಗಳಿಗೆ ಜಿಎಸ್‌ಟಿಯನ್ನು ಕಟ್ಟುವ ಅಗತ್ಯವಿಲ್ಲ.

ಹೌದು, ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕ್ರಾಂತಿಯ ಬಗ್ಗೆ ಮಾತನಾಡಿದ್ದರು. ಹಲವು ವಸ್ತುಗಳ ಜಿಎಸ್‌ಟಿ (GST) ದರ ಇಳಿಸುವ ಮೂಲಕ ದೇಶದ ಜನರಿಗೆ ದೀಪಾವಳಿ ಉಡುಗೊರೆ ಕೊಡುವುದಾಗಿ ತಿಳಿಸಿದ್ದರು. ಅಂತೆಯೇ ಇದೀಗ ದೇಶದ ಜನತೆಗೆ ದೀಪಾವಳಿಗೆ ಹಾಗೂ ದಸರ ಹಬ್ಬಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ.

ಈ ವಸ್ತುಗಳಿಗೆ ಇನ್ನು ತೆರಿಗೆ ಇಲ್ಲ:
ಯುಎಚ್​ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಇವಗಳು ಈವರೆಗೆ ಶೇ 5 ರ ಜಿಎಸ್​ಟಿ ಸ್ಲ್ಯಾಬ್​​ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಅಲ್ಲದೆ ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾಸಾಮಗ್ರಿಗಳ ಮೇವಿನ ಜಿಎಸ್‌ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್‌ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇವುಗಳ ಮೇಲೆ ಮೊದಲು ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದನ್ನು ಸಂಪೂರ್ಣ ತೆರವು ಮಾಡಲಾಗಿದ್ದು, ಇನ್ಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ.

ಇದರೊಂದಿಗೆ ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆ ಪ್ರೀಮಿಯಂ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ. ಸೋಪ್‌, ಹೇರ್‌ ಆಯಿಲ್‌, ಶಾಂಪೂ, ಶೇವಿಂಗ್‌ ಕ್ರೀಮ್‌ ಮೇಲಿನ ತೆರಿಗೆ ಶೇ.12ರಿಂದ ಶೇ.5ಕ್ಕೆ ಇಳಿಯಲಿದೆ. 1200 ಸಿಸಿ ಒಳಗಿನ ಪೆಟ್ರೋಲ್‌ ಹಾಗೂ 1500 ಸಿಸಿ ಒಳಗಿನ ಡೀಸೆಲ್‌ ಕಾರುಗಳು, 350 ಸಿಸಿ ಒಳಗಿನ ಬೈಕ್‌ಗಳು ಅಗ್ಗವಾಗಲಿವೆ.

Comments are closed.