Luck: ಮಾತು ಬಾರದ, ಕಿವಿ ಕೇಳದ ದಿನಗೂಲಿ ನೌಕರನಿಗೆ ಒಲಿದ 1 ಕೋಟಿ ಹಣ!

Share the Article

Luck: ಅದೃಷ್ಟ (Luck)ಲಕ್ಷ್ಮೀ ಕೆಲವೊಮ್ಮೆ ಯಾವ ರೀತಿ ಯಲ್ಲಾದರೂ ಹುಡುಕಿ ಬರುತ್ತಾಳೆ. ಅಂತೆಯೇ ಭೀಮನಾಡ್‌ ಪೆರಿಂಬದರಿ ಪುತನ್‌ಪಲ್ಯದ ಕೃಷ್ಣನ್‌ಕುಟ್ಟಿ ಎಂಬುವರು ಕೇರಳ ಸರ್ಕಾರದ ಸಮೃದ್ಧಿ ಲಾಟರಿಯಲ್ಲಿ ಪ್ರಥಮ ಬಹುಮಾನ 1 ಕೋಟಿ ರೂಪಾಯಿ ಗೆದ್ದಿದ್ದಾರೆ.

ಕೃಷ್ಣನ್ ಕುಟ್ಟಿ ಓರ್ವ ಕೂಲಿ ಕಾರ್ಮಿಕ. ಅವರಿಗೆ ಮಾತನಾಡಲು ಬರುವುದಿಲ್ಲ. ಅಲ್ಲದೆ, ಕಿವಿಯೂ ಕೇಳಿಸಲ್ಲ. ಈ ಹಿಂದೆ ಸಣ್ಣ ಬಹುಮಾನಗಳನ್ನು ಸಹ ಗೆದ್ದಿದ್ದಾರೆ. ಕೃಷ್ಣನ್ ಕುಟ್ಟಿ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ.

ಇದನ್ನೂ ಓದಿ:IPL ಅಭಿಮಾನಿಗಳಿಗೆ ಕೇಂದ್ರ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಪೆರಿಂಬತ್ತರಿಯ ಲಾಟರಿ ಮಾರಾಟಗಾರ ಮಾಂಬಟ ಅಬ್ದು ಅವರಿಂದ ಅವರು ಖರೀದಿಸಿದ್ದ MV122462 ಸಂಖ್ಯೆಯ ಲಾಟರಿಗೆ ಬಹುಮಾನ ಬಂದಿದೆ. ಕೃಷ್ಣನ್ ಅವರು ನಾಲ್ಕು ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದರು. ಅವುಗಳಲ್ಲಿ ಒಂದನ್ನು ಗೆದ್ದಿರುವುದಾಗಿ ಅಬ್ದು ಸ್ವತಃ ಘೋಷಿಸಿದ್ದಾರೆ. ಟಿಕೆಟ್ ಅನ್ನು ಸೌತ್ ಇಂಡಿಯನ್‌ ಬ್ಯಾಂಕ್‌ಗೆ ಹಸ್ತಾಂತರಿಸಲಾಗಿದೆ. ತೆರಿಗೆ ಎಲ್ಲ ಕಡಿತವಾಗಿ ಉಳಿದ ಹಣ ಕೃಷ್ಣನ್ ಅವರ ಕೈಸೇರಲಿದೆ.

Comments are closed.