Dharmasthala Case: ಉದಯ್ ಕುಮಾರ್ ಜೈನ್ ಗೆ SIT ಬುಲಾವ್ !! ವಿಚಾರಣೆಗೆ ಹಾಜರು

Dharmasthala Case: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ ಚಿನ್ಯಯ್ಯನ ದೂರಿನ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ನಡುವೆ ಸೌಜನ್ಯ ತಾಯಿ ಕೂಡ ತನ್ನ ಮಗಳ ಪ್ರಕರಣದ ಕುರಿತು ತನಿಖೆ ನಡೆಸಬೇಕೆಂದು ಎಸ್ಐಟಿಗೆ ದೂರು ನೀಡಿದ್ದರು. ಈದೂರಿಗೆ ಸಂಬಂಧಿಸಿದಂತೆ ಇದೀಗ ಎಸ್ಐಟಿ ಉದಯ್ ಕುಮಾರ್ ಗೆ ಬುಲಾವ್ ನೀಡಿದೆ.
ಹೌದು, ಉದಯ್ ಕುಮಾರ್ ಜೈನ್ ಸೇರಿ ಹಲವರಿಗೆ SIT ಬುಲಾವ್ ನೀಡಿದೆ. ಸೌಜನ್ಯ ಮನೆಯವರು ಉದಯ್ ಕುಮಾರ್ ಸೇರಿ ಹಲವರ ಮೇಲೆ ಆರೋಪ ಮಾಡಿದ್ದರು. ಇದೀಗ ಉದಯ್ ಕುಮಾರ್ ಜೈನ್ ಎಸ್ ಐ ಟಿ (SIT) ವಿಚಾರಣೆಗೆ ಹಾಜರಾಗಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಉದಯ್ ಜೈನ್, ‘ಬುಧವಾರ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಯೊಬ್ಬರು ನಿನ್ನೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.
ಅಂದಹಾಗೆ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲ ಅವರ ಹೆಸರು ಕೂಡ ತಳಕು ಹಾಕಿಕೊಂಡಿತ್ತು.

Comments are closed.