EV Cars: ಶ್ರೀಮಂತರ ಐಷಾರಾಮಿ EV ಕಾರುಗಳು ಇನ್ನಷ್ಟು ದುಬಾರಿ – ಜಿಎಸ್ಟಿ ಕೌನ್ಸಿಲ್ನಲ್ಲಿ ಪ್ರಸ್ತಾಪ : ಆಟೋ ಷೇರುಗಳು ಕುಸಿತ

EV Cars: ₹40 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮೇಲಿನ ತೆರಿಗೆಯನ್ನು ಶೇ.5 ರಿಂದ ಶೇ.28ಕ್ಕೆ ಮತ್ತು ₹20-40 ಲಕ್ಷದ ನಡುವಿನ ಬೆಲೆಯ ಕಾರುಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಜಿಎಸ್ಟಿ ಕೌನ್ಸಿಲ್ ಮುಂದಿಟ್ಟಿದೆ ಎಂದು ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ವರದಿಯಲ್ಲಿ ಉಲ್ಲೇಖಿಸಲಾದ ಕಾರಣವೆಂದರೆ ಈ ಕಾರುಗಳು ಸಮಾಜದ ‘ಮೇಲ್ವರ್ಗ’ಕ್ಕೆ ಸೇರಿವೆ ಮತ್ತು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ. “ಎಲೆಕ್ಟಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ ಮತ್ತು 5% ರಷ್ಟು ಕಡಿಮೆ ದರವು EV ಅಳವಡಿಕೆಯನ್ನು ವೇಗಗೊಳಿಸಲು ಸಾಕಾಗುತ್ತದೆ, ಆದರೆ ಹೆಚ್ಚಿನ ಬೆಲೆಯ EV ಗಳಿಗೆ ಹೆಚ್ಚಿನ ದರಗಳು ಅನ್ವಯವಾಗುವುದು ಸಹ ಮುಖ್ಯವಾಗಿದೆ” ಎಂದು ಸಮಿತಿಯ ದಾಖಲೆಯನ್ನು ಉಲ್ಲೇಖಿಸಿ ವರದಿ ಹೇಳಿದೆ.
ಆಟೋ ಷೇರುಗಳು: ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಹಲವು ವಲಯಗಳ ಷೇರುಗಳು ಬಲವಾದ ಏರಿಕೆ ಕಂಡವು. ಆದರೆ, ಆಟೋ ವಲಯದ ದೊಡ್ಡ ಷೇರುಗಳಾದ ಮಹೀಂದ್ರಾ & ಮಹೀಂದ್ರಾ (ಎಂ & ಎಂ) ಮತ್ತು ಟಾಟಾ ಮೋಟಾರ್ಸ್ ಕುಸಿತದೊಂದಿಗೆ ಮುಕ್ತಾಯಗೊಂಡವು. ಇದಕ್ಕೆ ಕಾರಣ ತೆರಿಗೆ ಸಮಿತಿಯು ಕೆಲವು ಎಲೆಕ್ಟಿಕ್ ವಾಹನಗಳ (ಇವಿ) ಮೇಲಿನ ಜಿಎಸ್ಟಿಯನ್ನು ಶೇಕಡಾ 5 ರಿಂದ 18 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ ಎಂದು ಹೇಳಲಾದ ವರದಿಯಾಗಿದೆ.
ಎಂ & ಎಂ ಷೇರುಗಳು ಶೇ.2.33 ರಷ್ಟು ಕುಸಿದು ₹3,238 ಕ್ಕೆ ಮುಕ್ತಾಯಗೊಂಡವು. ಡಾ. ರೆಡೀಸ್ ನಂತರ ನಿಫ್ಟಿ 50 ಸೂಚ್ಯಂಕದಲ್ಲಿ ಇದು ಅತಿ ದೊಡ್ಡ ನಷ್ಟವಾಗಿತ್ತು. ಮತ್ತೊಂದೆಡೆ, ಟಾಟಾ ಮೋಟಾರ್ಸ್ ಸುಮಾರು ಶೇ. 1 ರಷ್ಟು ಕುಸಿದು ₹684.30 ಕ್ಕೆ ಮುಕ್ತಾಯವಾಯಿತು.
Comments are closed.