Health Department : ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ‘ವಿಶೇಷ ಪೌಷ್ಟಿಕ ಆಹಾರ’ ನೀಡಲು ಸರ್ಕಾರ ನಿರ್ಧಾರ

Health Department :ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರ ಯೋಜನೆ ಜಾರಿಗೆ ಮುಂದಾಗಿದೆ.

ಹೌದು, ಸರ್ಕಾರಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ, ಮುಖ್ಯವಾಗಿ ಮಕ್ಕಳು, ಗರ್ಭಿಣಿಯರು, ಮತ್ತು ಬಾಣಂತಿಯರಿಗೆ, ಈ ಹಿಂದೆ ಒಂದೇ ರೀತಿಯ ಸಾಮಾನ್ಯ ಆಹಾರವನ್ನು ನೀಡಲಾಗುತ್ತಿತ್ತು. ಇದು ರೋಗಿಗಳ ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿರಲಿಲ್ಲ. ಆದರೀಗ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಇನ್ಮುಂದೆ ವಿಶೇಷ ಪೌಷ್ಟಿಕ ಆಹಾರ ಲಭ್ಯವಾಗಲಿದೆ.
ಈ ಕಾರ್ಯಕ್ರಮಕ್ಕೆ ಇಸ್ಕಾನ್ ಸಂಸ್ಥೆಯು ಸಹಭಾಗಿತ್ವ ನೀಡಿದ್ದು ಈ ಹಿಂದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲಾ ಒಳರೋಗಿಗಳಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗುತ್ತಿತ್ತು. ಆದರೆ, ಈಗ ಈ ಪದ್ಧತಿಯನ್ನು ಬದಲಾಯಿಸಿ, ಸಾಮಾನ್ಯ ಆಹಾರ ಕ್ರಮ (General Diet Plan), ಚಿಕಿತ್ಸಾ ಆಹಾರ ಕ್ರಮ (therapeutic diet) ಗರ್ಭಿಣಿಯರ ಆಹಾರ ಕ್ರಮ(Pregnancy Diet Plan) ಬಾಣಂತಿಯರ ಆಹಾರ ಕ್ರಮ Diet Plan) ಹಾಗು ಮಕ್ಕಳ ಆಹಾರ ಕ್ರಮ (Paediatric diet plan) ಎಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ನೀಡಲಾಗುತ್ತದೆ.
ಮೊದಲ ಹಂತದಲ್ಲಿ ಸಿ.ವಿ ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ನಗರದ ಮೂರು ಕಡೆ ಯೋಜನೆ ಪ್ರಾರಂಭವಾಗಲಿದ್ದು, ಪ್ರತಿ ಆಸ್ಪತ್ರೆಗಳಲ್ಲಿ 250 ರೋಗಿಗಳಿಗೆ ಪ್ರತಿದಿನ ಆಹಾರ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಗಾಗಿ ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, 9 ತಿಂಗಳ ಅವಧಿಗೆ 1,37,45,700 ರೂ. ವೆಚ್ಚವನ್ನು ಆರೋಗ್ಯ ಇಲಾಖೆ ಭರಿಸುತ್ತೆದೆ. ರೋಗಿಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಬೆಳಗ್ಗೆ ಹಾಗೂ ಸಂಜೆ ಲಘು ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಆರೋಗ್ಯ ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ.
Comments are closed.