ಸೌಜನ್ಯ ಮನೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಬಿಜೆಪಿ; ಕುಸುಮಾವತಿ ಕಣ್ಣೀರ ಮಧ್ಯೆ ಹೇಳಿದ ಆ ಸತ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಥoಡಾ!

Share the Article

ಧರ್ಮಸ್ಥಳ: ಇವತ್ತು ಬಿಜೆಪಿಯ ಧರ್ಮ ರಕ್ಷಣಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆಕಸ್ಮಿಕವೋ, ತಂತ್ರಗಾರಿಕೆಯೋ ಅಥವಾ ಜ್ಞಾನೋದಯವೋ ಗೊತ್ತಿಲ್ಲ: ಬಿಜೆಪಿಯ ರಾಜ್ಯಧ್ಯಕ್ಷ ಮತ್ತು ಕೆಲಗಣ್ಯರು ದಾರಿ ತಪ್ಪಿಯೇನೋ ಎಂಬಂತೆ ಶೋಷಿತ ಅಮ್ಮ ಕುಸುಮಾವತಿಯವರ ಮನೆಗೆ ಕಾಲಿಟ್ಟಿದ್ದಾರೆ. ಬಿಜೆಪಿ ನಾಯಕರ ಈ ನಡೆಯನ್ನು ರಾಜಕಾರಣ, ತಂತ್ರಗಾರಿಕೆ, ಕರಾಳ ಕಪ್ಪು ತಪ್ಪು ಹೆಜ್ಜೆ ಇತ್ಯಾದಿ ಹೆಸರುಗಳಿಂದ ಇದೀಗ ಸೋಷಿಯಲ್ ಮೀಡಿಯಾ ಮಂದಿ ಕರೆಯುತ್ತಿದ್ದಾರೆ. ಅದನ್ನೆಲ್ಲ ಬಿಟ್ಟು ನೋಡಿದರೆ, ಯಾಕೆಂದರೆ ಧರ್ಮಸ್ಥಳ ಸಾಮ್ರಾಜ್ಯ ಪಕ್ಕದಲ್ಲೇ ಇರುವಾಗ ಆಕೆಯ ಮನೆಗೆ ರಾಜಕಾರಣಿಗಳು ಹೋದದ್ದು ಕಮ್ಮಿ. ಹಾಗಾಗಿ ಇದು ಒಳ್ಳೆಯ ಬೆಳವಣಿಗೆ ಅಂತ ನಾವು ಹೇಳಬಹುದು.

ಕಣ್ಣೀರ ಮಾತು ಕೇಳಿ ಥoಡಾ ಹೊಡೆದ ಬಿಜೆಪಿ ಬಳಗ

ಈ ಮಧ್ಯೆ ಕುಸುಮಾವತಿಯವರ ಅಂದರೆ ಸೌಜನ್ಯ ಹುಟ್ಟಿ ಬೆಳೆದ ಮನೆಯಲ್ಲಿ ಒಂದು ಮಹತ್ವದ ಘಟನೆ ನಡೆದಿದೆ. ಅಬ್ಬರಿಸಿ ಧರ್ಮಸ್ಥಳದಲ್ಲಿ ಬೊಬ್ಬಿರಿದು ಗುಂಪಾಗಿ ಹೋದ ತಂಡವನ್ನು ಅಮ್ಮಲೊಬ್ಬಳ ಕಣ್ಣೀರು ತಣ್ಣಗಾಗುವಂತೆ ಮಾಡಿದೆ. ಅದರ ಪೂರ್ಣ ವಿವರ ಇಲ್ಲಿದೆ ಓದಿ.

ಅಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಇಡೀ ತಂಡ ಥoಡಾ ಹೊಡೆಯಲು ಕಾರಣವಾದದ್ದು ದಿ. ಸೌಜನ್ಯಾಳ ಅಮ್ಮ ಕುಸುಮಾವತಿ ಹೇಳಿದ ಒಂದು ಮಾತು. ಸೌಜನ್ಯ ತಾಯಿ ಕುಸುಮಾವತಿ ವಿಜಯೇಂದ್ರರ ಮುಂದೆ ನೋವು ತೋಡಿಕೊಳ್ಳುತ್ತಾ ಹೇಳುತ್ತಾರೆ. “ವೀರೇಂದ್ರ ಜೈನ್ ಎಂಬ ದೊಡ್ಡವರು ನನ್ನ ಕುಟುಂಬದ ಕಡೆಯವರಿಂದಲೇ ತಪ್ಪು ಆಗಿದೆ, ಸುಮ್ಮನಾಗಿ ಬಿಡಿ ಎಂದು ನಮ್ಮ ದೊಡ್ಡಪ್ಪನಿಗೆ ಹೇಳಿದ್ದಾರೆ”. ಅಮ್ಮ ಒಬ್ಬಳ ಕಣ್ಣೀರಿನ ಜತೆ ಹರಿದ ಈ ಮಾತು ಕೇಳಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಉಳಿದ ಎಲ್ಲರೂ ಥoಡಾ ಆಗಿದ್ದಾರೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರ ಬಳಿ ಮತ್ತೊಂದು ಮಾತನ್ನು ಕುಸುಮಾವತಿ ಪ್ರಸ್ತಾಪಿಸಿದ್ದಾರೆ. “ನನ್ನ ಗಂಡ ಮತ್ತು ತಮ್ಮ ವಿಠಲ ಗೌಡ ಇದೇ ವೀರೇಂದ್ರ ಜೈನ್ ತಮ್ಮನ ಮನೆಗೆ ನ್ಯಾಯ ಕೇಳಲು ಹೋದಾಗ ಆತ ಹೇಳಿದ ಮಾತೇನು ಎಂದು ಕುಸುಮಾವತಿ ಬಿಕ್ಕಿ ಬಿಕ್ಕಿ ರಾಜ್ಯಾಧ್ಯಕ್ಷರ ಮುಂದೆ ಹೇಳಿದ್ದಾರೆ.

“ಹೌದಾ ಮಾರಾಯ, ಒಳ್ಳೆಯ ಹುಡುಗಿ. ತುಂಬಾ ಚೆನ್ನಾಗಿ ಇದ್ದಳು. ಇನ್ನು ನೀನು ನ್ಯಾಯ ಕೇಳ್ಕೊಂಡು ಅಲ್ಲಲ್ಲಿ ತಿರುಗಬೇಡ. ಇನ್ನು ಪಕ್ಷದವರು ದುಡ್ಡು ಕೊಡ್ತಾರೆ. ಅದನ್ನು ತೆಗೆದುಕೊಂಡು ಕೋರ್ಟು ಕಚೇರಿ ಅಂತ ಖರ್ಚು ಮಾಡಬೇಡ. ಇನ್ನೂ ಮಕ್ಕಳಿದ್ದಾರೆ ಅವರನ್ನು ನೋಡ್ಕೋ.” ಇದು ನೋವಿನ ಕುಟುಂಬಕ್ಕೆ ಓರ್ವ ಹೇಳುವ ಮಾತಾ?

ಅದೇ ವೀರೇಂದ್ರ ಜೈನ್ ತಮ್ಮ ಮುಂದುವರಿಸಿ, ಸೌಜನ್ಯ ಮಾವ ವಿಠಲ ಗೌಡರನ್ನು ಕರೆದು,”ನೋಡು, ನೀವು ಕೂಡಾ ನಡಕೊಂಡು ಹೋಗುವಾಗ ಆಚೆ ಈಚೆ ದೊಡ್ಡ ಬಂಡೆ ಕಲ್ಲು ಇರುತ್ತೆ. ನೋಡ್ಕೊಂಡು ನಡಿ. ಜಾಗೃತೆ ನಡಿ” ಎಂದು ಎಚ್ಚರಿಕೆ ನೀಡಿದ್ದಾಗಿ ಕುಸುಮಾವತಿಯವರು ಕಣ್ಣೀರು ಹಾಕಿ ರಾಜ್ಯಾಧ್ಯಕ್ಷರ ಮುಂದೆ ಹೇಳಿದ್ದರು.

ಧರ್ಮ ರಕ್ಷಣೆಯ ಫಲಿತಾಂಶ ಏನಾಯ್ತು?

ಈ ಮಾತು ಕೇಳಿ ವಿಜಯೇಂದ್ರ & ಟೀಮ್ ಗೆ ಒಂದು ಕ್ಷಣ ಏನೂ ಮಾಡುವುದಕ್ಕೆ ಯೋಚನೆ ಬಂದಿಲ್ಲ. ಮೂಕವಾಗಿದೆ ಬಿಜೆಪಿ. ಏನು ಮಾಡುತ್ತಾರೆ? ಕೋಟಿ ಸುರಿದು ಸೇರಿದ ಜನರಿಗಿಂತ ಹೆಚ್ಚಾಗಿ ಬರಿ ಬಂಟಿಂಗ್ ಬ್ಯಾನರ್ ಹಾಕಿಸಿ ಈಗ ತಲೆ ಮೇಲೆ ಟವಲ್ ಹಾಕಿ ಕುಳಿತಿದ್ದಾರಂತೆ ‘ಪೆರಿಯ’ ಮನುಷ್ಯ. ಕೋಟಿ ಕೋಟಿ ಸುರಿದರೂ ತನ್ನ ಕುಟುಂಬದ ಬಂಡವಾಳ ಹೀಗೆ ಬಯಲಾಯಿತಲ್ಲ ಅಂತ ಡಿ ಬಾಸ್ ಗೆ ಬೇಸರವಾಗಿದೆ ಅಂತೆ. ಕೋಟಿಗಳ ಶಕ್ತಿಯನ್ನು ಒಂದು ನೋವು, ಸೆರಗಲ್ಲಿ ಒರೆಸಿಕೊಳ್ಳಬಹುದಾದ ತೆಳ್ಳಗಿನ ಕಣ್ಣೀರು ಮೀರಿಸಿದೆ.

ಅದಕ್ಕೆ ಹೇಳುವುದು: ಸತ್ಯವನ್ನು ಯಾವತ್ತೂ ಮುಚ್ಚಿಡಲು ಆಗುವುದಿಲ್ಲ ಅಂತ. ಎಷ್ಟೇ ದುಡ್ಡು ಚೆಲ್ಲಿದರೂ ಕೆಲವು ವಸ್ತುಗಳನ್ನು, ಕೆಲವು ವ್ಯಕ್ತಿಗಳನ್ನು ಮತ್ತು ಕೆಲವು ಭಾವನೆಗಳನ್ನು ಕೊಂಡು ಕೊಳ್ಳಲು ಆಗಲ್ಲ ಅಂತ. ತಾಯಿ ಕುಸುಮವತಿಯವರ ಮಾತು ಕೇಳಿ “ಧರ್ಮಸ್ಥಳ ಚಲೋ “ ಎಂದು ಬಂದವರು ವಾಪಸ್ ಹೋಗುವಾಗ ನೋವಿನಿಂದ ಹೋಗಿದ್ದಾರೆ ಅನ್ನೋದು ಅವರ ಮುಖ ಭಾವದಿಂದಲೇ ತಿಳಿಯುತ್ತಿತ್ತು. ಇದೇ ಅಣ್ಣಪ್ಪನ ಲೀಲೆ, ಮಂಜುನಾಥನ ಮಹಿಮೆ ಮತ್ತು ಸೌಜನ್ಯ ಶಕ್ತಿ ಅಂತಿದ್ದಾರೆ ಹೋರಾಟಗಾರರು.

Comments are closed.