ಧರ್ಮಸ್ಥಳ: NIA ತನಿಖೆಯ ಅಗತ್ಯವಿಲ್ಲ, ವೀರೇಂದ್ರ ಹೆಗ್ಗಡೆ ಕೂಡಾ SIT ತನಿಖೆಯನ್ನು ಸ್ವಾಗತಿಸಿದ್ದಾರೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕಥೆ ಏನಾಗಲಿದೆ? ಎಲ್ಲೆಲ್ಲೂ ಹೆಚ್ಚಿದೆ ಕುತೂಹಲ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು SIT ತನಿಖೆಯ ಬಗ್ಗೆ ಮಾತಾಡಿದ್ದಾರೆ. ಪ್ರಕರಣವನ್ನು SIT ತನಿಖೆಯ ಬದಲು ಎನ್ ಐಎಗೆ ವಹಿಸುವ ಅಗತ್ಯ ಇಲ್ಲ ಅಂದಿದ್ದಾರೆ. ಬಿಜೆಪಿ ಪಕ್ಷವು ಪ್ರಕರಣವನ್ನು NIA ಗೆ ವಹಿಸಬೇಕು ಅನ್ನುತ್ತಿದೆ. SIT ಯು ಈ ಪ್ರಕರಣದ ತನಿಖೆ ನಡೆಸಿದರೆ ಸಾಕು, ಎನ್ ಐಎ ಬೇಕಾಗಿಲ್ಲ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಅಂದಿದ್ದಾರೆ ಸಿಎಂ ಸಿದ್ದರಾಮಯ್ಯನವರು.

ನಾಳೆ ಧರ್ಮಸ್ಥಳದಲ್ಲಿ ಬಿಜೆಪಿಯಿಂದ ಧರ್ಮ ಸಂರಕ್ಷಣೆ ಯಾತ್ರೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬಿಜೆಪಿಯ ರಾಜಕೀಯವನ್ನು ಟೀಕಿಸಿದ್ದಾರೆ.
ಬಿಜೆಪಿಯವರಿಗೆ ಎಲ್ಲದರಲ್ಲೂ ರಾಜಕೀಯ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ SIT ತನಿಖೆಯನ್ನು ಸ್ವಾಗತಿಸಿದ್ದಾರೆ. ಸತ್ಯ ಗೊತ್ತಾಗಬೇಕಲ್ಲ? ಅನುಮಾನ ಮತ್ತು ಸಂದೇಹ ಹೋಗಬೇಕಲ್ಲ? ಅನುಮಾನ ಹೋಗಲಾಡಿಸಲು ಎಸ್ ಐಟಿ ತನಿಖೆಯನ್ನು ನಡೆಸುತ್ತಿದ್ದೇವೆ. ಬಿಜೆಪಿಯವರು ಕೂಡಾ ಎಸ್ ಐಟಿ ತನಿಖೆಯನ್ನು ಸ್ವಾಗತಿಸಿತ್ತು. ಈಗ ಧರ್ಮದ ಹೆಸರಲ್ಲಿ ರಾಜಕೀಯ ಮಾಡ್ತಾ ಇದ್ದಾರೆ. ಅವರಿಗೆ ಧರ್ಮದ ಬಗ್ಗೆಯೂ ಗೊತ್ತಿಲ್ಲ, ಜಾತಿಯ ಬಗ್ಗೆಯೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.
Comments are closed.