Bollywood: ಕ್ಯಾನ್ಸರ್‌ನಿಂದ ಕಿರುತೆರೆ ನಟಿ ಪ್ರಿಯಾ ಮರಾಠೆ 38ನೇ ವಯಸ್ಸಿಗೆ ನಿಧನ!

Share the Article

Bollywood: ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

38 ವಯಸ್ಸಿನ ನಟಿ ಪ್ರಿಯಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ಪ್ರಿಯಾ ಅವರು ಪತಿ, ನಟ ಶಾಂತನು ಮೋಘೆ ಅವರನ್ನು ಅಗಲಿದ್ದಾರೆ.

ಪ್ರಿಯಾ ಅವರು ‘ಯಾ ಸುಖನೋ ಯಾ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಚಾರ್ ದಿವಸ್ ಸಸುಚೆ’ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Comments are closed.