ದಾವಣಗೆರೆ: ಹಿಂದೂ ಮುಖಂಡ ಸತೀಶ್‌ ಪೂಜಾರಿ ಬಂಧನ, ಬಿಡುಗಡೆ

Share the Article

ದಾವಣಗೆರೆ: ವಿವಾದಿತ ಫ್ಲೆಕ್ಸ್‌ ತೆರವು ಮಾಡಿದ್ದನ್ನು ಪ್ರಶ್ನೆ ಮಾಡಿ ಪ್ರತಿಭಟಿಸಿದ್ದ ಹಿಂದೂ ಮುಖಂಡ ಸತೀಶ್‌ ಪೂಜಾರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮಟ್ಟಿಕಲ್‌ನಲ್ಲಿ ಅಫ್ಜಲ್‌ ಖಾನ್‌ನನ್ನು ಛತ್ರಪತಿ ಶಿವಾಜಿ ಕೊಂದ ಫ್ಲೆಕ್ಸ್‌ ಹಾಕಲಾಗಿತ್ತು. ಪೊಲೀಸರು ಕೂಡಲೇ ಈ ಫ್ಲೆಕ್ಸನ್ನು ತೆರವು ಮಾಡಿದ್ದಾರೆ. ತೆರವು ಮಾಡಿದ್ದನ್ನು ವಿರೋಧ ಮಾಡಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಹಿಂದೂ ಜಾಗರಣ ವೇದಿಕೆ ರಾಜ್ಯ ದಕ್ಷಿಣ ವಿಭಾಗೀಯ ಸಹ ಸಂಚಾಲಕ ಸತೀಶ್‌ ಪೂಜಾರಿ ಮುಂದೆ ಇದ್ದರು.

ಹಾಗಾಗಿ ಗಲಭೆಗೆ ಪ್ರಚೋದನೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಸತೀಶ್‌ ಪೂಜಾರಿಯನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧನ ಮಾಡಿದ್ದಾರೆ. ಹೀಗಾಗಿ ಹಿಂದೂ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿದ್ದರು. ಸತೀಶ್‌ ಪೂಜಾರಿಯನ್ನು ಬಿಡುಗಡೆ ಮಾಡುವವರೆಗೆ ಸ್ಥಳದಿಂದ ಹೋಗುವುದಿಲ್ಲ ಎಂದು ಹಿಂದೂ ಕಾರ್ಯಕರ್ತರು ಪಟ್ಟು  ಹಿಡಿದಿದ್ದರು.

ನಂತರ ಸ್ಟೇಷನ್‌ ಬೇಲ್‌ ಮೇಲೆ ಸತೀಶ್‌ ಪೂಜಾರಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

 

Comments are closed.