Hero Splendor : ಅಗ್ಗದ ಬಲೆಗೆ ಹೊಸ ರೂಪ ಪಡೆದು ಬಂದ ಹೀರೋ ಸ್ಪ್ಲೆಂಡರ್‌ ಭಾರೀ ಡಿಮ್ಯಾಂಡ್- ಬರೋಬ್ಬರಿ 2.46 ಲಕ್ಷ ಬೈಕ್ ಮಾರಾಟ !!

Share the Article

Hero Splendor : ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಇದುವರೆಗೂ ಯಾವ ಬೈಕ್ ಪಡೆದಿಲ್ಲ, ಬಹುಷಃ ಮುಂದೆಯೂ ಪಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಈ ಮೋಟಾರ್‌ಸೈಕಲ್‌ ಜನಪ್ರಿಯತೆ ಗಳಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ.

ಏಪ್ರಿಲ್ 1994 ರಲ್ಲಿ ಪ್ರಾರಂಭವಾದಾಗಿನಿಂದ ಇದು ಹಲವಾರು ರೂಪಾಂತರಗಳನ್ನು ಕಂಡಿದೆ. ಹೀರೋ ಇತ್ತೀಚೆಗೆ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಅನ್ನು ಬಿಡುಗಡೆ ಮಾಡಿತು , ಇದು ತಾಂತ್ರಿಕ ಪರಿಭಾಷೆಯಲ್ಲಿ ನವೀಕೃತವಾಗುವಂತೆ ಹಲವಾರು ನವೀಕರಣಗಳನ್ನು ಪಡೆಯಿತು. ಸಧ್ಯ ಇದು ಸ್ಪ್ಲೆಂಡರ್ ಪ್ಲಸ್ ಹಾಗೂ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಎಂಬ ಎರಡು ರೂಪದಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಈ ಜುಲೈನಲ್ಲೂ ಇದೇ ಬೈಕ್‌ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,46,715 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ಮಾರಾಟಗೊಳ್ಳಲು ಕಾರಣ?

ಈ ಹೀರೋ ಸ್ಪ್ಲೆಂಡರ್ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳಲು ನಾನಾ ಕಾರಣಗಳಿವೆ. ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಮುಗಿಬಿದ್ದು ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ವಹಣಾ ವೆಚ್ಚವು ಅಗ್ಗವಾಗಿದು, ಉತ್ತಮವಾದ ಮೈಲೇಜ್ ಸಹ ನೀಡುತ್ತದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ವಿಶೇಷತೆಗಳೇನು:

ಇದು ಸ್ಟ್ಯಾಂಡರ್ಡ್ ಆಗಿ ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮತ್ತು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಎಂಬ ರೂಪಾಂತರದೊಂದಿಗೆ (ವೇರಿಯೆಂಟ್) ಸಿಗುತ್ತದೆ. ಕನಿಷ್ಠ ರೂ.79,000 ಹಾಗೂ ಗರಿಷ್ಠ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯೂ ಬ್ಲ್ಯಾಕ್, ಬ್ಲ್ಯಾಕ್ ರೆಡ್ ಪರ್ಪಲ್, ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಹಾಗೂ ಫೋರ್ಸ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಈ ಮೋಟಾರ್‌ಸೈಕಲ್‌ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 97.2 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8,000 ಆರ್‌ಪಿಎಂನಲ್ಲಿ 8 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,000 ಆರ್‌ಪಿಎಂನಲ್ಲಿ 8.05 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಅಲ್ಲದೆ ಕರೆಗಳು ಮತ್ತು ಸಂದೇಶ ಎಚ್ಚರಿಕೆಗಳನ್ನು ಒದಗಿಸುವ ಬ್ಲೂಟೂತ್ ಸಂಪರ್ಕದೊಂದಿಗೆ ಮೊದಲ ಪೂರ್ಣ-ಡಿಜಿಟಲ್ ಡಿಸ್ಪ್ಲೇ, ಎರಡು ಟ್ರಿಪ್‌ಮೀಟರ್‌ಗಳು, ನೈಜ ಸಮಯದ ಮೈಲೇಜ್ ಸೂಚಕ ಮತ್ತು ಕಡಿಮೆ ಇಂಧನ ಸೂಚಕ, ಇಂಧನ ಗೇಜ್, ಸ್ಪೀಡೋಮೀಟರ್ ಮತ್ತು ಓಡೋಮೀಟರ್‌ನಂತಹ ರನ್-ಆಫ್-ದಿ-ಮಿಲ್ ಮಾಹಿತಿಯನ್ನು ಹೊರತುಪಡಿಸಿ. ಇದು ಇಂಟಿಗ್ರೇಟೆಡ್ USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ.

Bagalakote : ಚಡ್ಡಿ ಗ್ಯಾಂಗ್ ಹಾವಳಿ – ಅಮೆರಿಕದಲ್ಲಿ ಕುಳಿತು ಬಾಗಲಕೋಟೆ ಮನೆಯ ಕಳ್ಳತನ ತಪ್ಪಿಸಿದ ಯುವತಿ

Comments are closed.