BBK-12: ಈ ವಿಶೇಷ ದಿನದಂದು ‘ಬಿಗ್ ಬಾಸ್ ಕನ್ನಡ-12’ ಪ್ರೋಮೋ ರಿಲೀಸ್​, ಆರಂಭಕ್ಕೂ ಡೇಟ್ ಫಿಕ್ಸ್

Share the Article

BBK-12: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಯಾವಾಗಿನಿಂದ ಬಿಗ್ ಬಾಸ್ (Bigg Boss) ಆರಂಭ ಆಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿವೆ. ಆದರೆ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇದೀಗ ʼಬಿಗ್‌ ಬಾಸ್‌ ಕನ್ನಡ -12ʼರ ಬಗ್ಗೆ ಹೊಸ ಅಪ್ಡೇಟ್‌ ಹೊರಬಿದ್ದಿದೆ.

ಮೂಲಗಳ ಪ್ರಕಾರ, ʼಬಿಗ್‌ ಬಾಸ್‌ʼ ಕಾರ್ಯಕ್ರಮದ ಮೊದಲ ಪ್ರೋಮೋ ಶೂಟ್‌ ಇತ್ತೀಚೆಗೆ ಮುಕ್ತಾಯ ಕಂಡಿದೆ. ಈ ಪ್ರೋಮೋ ವಿಶೇಷ ದಿನದಂದು ಪ್ರೇಕ್ಷಕರ ಮುಂದೆ ಬರಲಿದೆ. ಇದೇ ಸೆ.2 ರಂದು ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬವಿದೆ. ಆ ದಿನನೇ ʼಬಿಗ್‌ ಬಾಸ್‌ -12ʼ ರ ಪ್ರೋಮೋ ರಿವೀಲ್‌ ಆಗಲಿದೆ ಎನ್ನಲಾಗಿದೆ. ಆ ದಿನ ಆಯೋಜಕರು ಪ್ರೋಮೋ ರಿಲೀಸ್‌ ಮಾಡಲಿದ್ದು, ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್‌ ಮಾಡಲಾಗಿದೆ ಎನ್ನಲಾಗಿದೆ.

ಇನ್ನು ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎನ್ನಲಾಗಿದೆ. 29ರಿಂದ ದೊಡ್ಮನೆ ಆಟ ಶುರುವಾಗಲಿದೆ. ಯಾವೆಲ್ಲ ಸ್ಪರ್ಧಿಗಳು ಈ ಬಾರಿ ಇರುತ್ತಾರೆ ಎನ್ನುವ ಕುತೂಹಲಕ್ಕೆ ಪ್ರೋಮೋದಲ್ಲಿ ಉತ್ತರ ಸಿಗಲಿದೆ.

Comments are closed.