Pink paper: ಚಿನ್ನ, ಬೆಳ್ಳಿ ಆಭರಣಗಳನ್ನು ಗುಲಾಬಿ ಬಣ್ಣದ ಪೇಪರ್ ನಲ್ಲಿ ಪ್ಯಾಕ್ ಮಾಡುವುದೇಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಫ್ಯಾಕ್ಟ್

Share the Article

Pink paper: ಚಿನ್ನ ಮತ್ತು ಬೆಳ್ಳಿ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದರೂ ಕೂಡ ಇದನ್ನು ಕೊಳ್ಳುವವರ ಸಂಖ್ಯೆಯಂತೂ ಕಡಿಮೆಯಾಗುತ್ತಿಲ್ಲ. ಪ್ರತಿದಿನವೂ ಬಂಗಾರದ ಅಂಗಡಿಗಳಲ್ಲಿ ಜನರ ಸಂದಣಿ ಬರುತ್ತಲೇ ಇದೆ. ಇನ್ನು ಚಿನ್ನ, ಬೆಳ್ಳಿಯನ್ನು ಕೊಳ್ಳಲು ಹೋದಂತಹ ಸಂದರ್ಭದಲ್ಲಿ ನೀವು ಎಲ್ಲೇ ಚಿನ್ನ, ಬೆಳ್ಳಿ ಖರೀದಿ ಮಾಡಿದರೂ ಪರ್ಸ್‌ ಅಥವಾ ಕ್ಯಾರಿ ಬ್ಯಾಗ್‌ ಜೊತೆಗೆ ಆ ಆಭರಣವನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ (pink paper) ಸುತ್ತಿ ಕೊಡುತ್ತಾರೆ. ಇದು ಏಕೆ ಎಂದು ನೀವು ಗಮನಿಸಿದ್ದೀರಾ?

ವರದಿಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತುವುದಕ್ಕೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಬದಲಿಗೆ ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವಾಗಿದೆ. ಹಿಂದಿನಿಂದಲೂ ಆಭರಣ ಆಂಗಡಿಯವರು ಗುಲಾಬಿ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಸುತ್ತಿಕೊಡುತ್ತಿದ್ದರು. ಏಕೆಂದರೆ ನಮ್ಮ ಸಂಪ್ರದಾಯದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಇದು ಶುಭ ಮತ್ತು ಇದು ಆಭರಣಗಳನ್ನು ಗೀರುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಈ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಇಡಲಾಗುತ್ತದೆ.

ಅಲ್ಲದೆ ಗುಲಾಬಿ ಬಣ್ಣದ ಕಾಗದವು ಸ್ವಲ್ಪ ಲೋಹೀಯ ಹೊಳಪನ್ನು ಹೊಂದಿದ್ದು, ಇದು ಆಭರಣಗಳು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ ಎಂಬುದನ್ನು ಕೆಲವು ಸಂಶೋಧನೆಗಳು ಕಂಡುಹಿಡಿದಿವೆ. ಆಭರಣಗಳನ್ನು ಕಪ್ಪು, ಬಿಳಿ ಇತ್ಯಾದಿ ಬಣ್ಣದ ಕಾಗದದಲ್ಲಿ ಇರಿಸಿದರೆ ಅದು ಅಷ್ಟೊಂದು ಆಕರ್ಷಕವಾಗಿ ಅಥವಾ ಹೊಳೆಯುವಂತೆ ಕಾಣುವುದಿಲ್ಲ.

ಇನ್ನೊಂದು ವಿಚಾರ ಏನಂದ್ರೆ, ಗುಲಾಬಿ ಬಣ್ಣವು ತುಂಬಾ ಆಕರ್ಷಕವಾಗಿರುತ್ತದೆ. ಯಾವುದೇ ಉಡುಗೊರೆಯನ್ನು ಗುಲಾಬಿ ಬಣ್ಣದಲ್ಲಿ ಪ್ಯಾಕ್ ಮಾಡಿದರೆ, ಅದು ಎಲ್ಲರ ಗಮನ ಸೆಳೆಯುತ್ತದೆ ಮತ್ತು ತುಂಬಾ ಸುಂದರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ. ಅದಕ್ಕಾಗಿಯೇ ಹೆಚ್ಚಾಗಿ ಗುಲಾಬಿ ಕಾಗದವನ್ನು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಇಡಲು ಆಯ್ಕೆ ಮಾಡಲಾಗುತ್ತದೆ, ಇದರಿಂದ ಅವುಗಳ ಹೊಳಪು ಹೆಚ್ಚಾಗುತ್ತದೆ.

Comments are closed.