KRS Dam: ಕೆಆರ್ಎಸ್ ಜಲಾಶಯದಿಂದ ಸ್ವಯಂಚಾಲಿತ ನೀರು ಬಿಡುಗಡೆ – ವಿಶ್ವದರ್ಜೆಯ ತಂತ್ರಜ್ಞಾನ ಅಳವಡಿಕೆ – 153 ಗೇಟ್ಗಳ ಕಾರ್ಯ ನಿರ್ವಹಣೆ

KRS Dam: ಮಂಡ್ಯ ಜಿಲ್ಲೆಯ ಐತಿಹಾಸಿಕ ಕೃಷ್ಣರಾಜಸಾಗರ (KRS) ಅಣೆಕಟ್ಟಿನಿಂದ ನವೆಂಬರ್ ವೇಳೆಗೆ ಸ್ವಯಂಚಾಲಿತವಾಗಿ ನೀರು ಬಿಡುಗಡೆಯಾಗಲಿದೆ. ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿರುವ ಸ್ವಯಂಚಾಲಿತ ಯೋಜನೆಯನ್ನು 63 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಕಲ್ಪನೆ ಹಾಗೂ ವಿಶ್ವೇಶ್ವರಯ್ಯ ಅವರ ಇಂಜಿನಿ ಯರಿಂಗ್ ಸೃಜನಾತ್ಮಕತೆಯಲ್ಲಿ ಕಳೆದ 93 ವರ್ಷದ ಹಿಂದೆ ಕೆಆರ್ಎಸ್ ಜಲಾಶಯ ನಿರ್ಮಾಣವಾಯಿತು. ಕೆಆರ್ಎಸ್ ಜಲಾಶಯದಲ್ಲಿ ನೈಜ ಸಮಯದ ನೀರಿನ ಮೇಲ್ವಿಚಾರಣೆ ಮತ್ತು ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸ್ವಾಧೀನ (ಎಸ್ಸಿಎಡಿಎ- ಸೂಪರ್ ವೈಸರಿ ಕಂಟ್ರೋಲ್ ಅಂಡ್ ಡಾಟಾ ಅಕ್ಯುಸೇಷನ್) ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಅನುಷ್ಠಾನ ಮಾಡಲಾಯಿತು.
ಸ್ವಯಂಚಾಲಿತ ನೀರು ಬಿಡುಗಡೆ ವ್ಯವಸ್ಥೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರ ಲಿಲ್ಲ. ಆದರೆ ಈಗ ಸ್ವಯಂಚಾಲಿತ ನೀರು ಬಿಡುಗಡೆ ವ್ಯವಸ್ಥೆಯನ್ನು ಅನುಷ್ಠಾನ ಮಾಡುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ವಿಶ್ವ ಬ್ಯಾಂಕ್ ನೆರವಿನಲ್ಲಿ ರಾಜ್ಯ ಸರ್ಕಾರ 63 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. 60 ಕೋಟಿ ರೂಪಾಯಿಯನ್ನು ಎಸ್ಸಿಎಡಿಎ ವ್ಯವಸ್ಥೆಗೆ ಹಾಗೂ 3 ಕೋಟಿ ರೂಪಾಯಿಗಳನ್ನು ನಾಗರಿಕ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ. ವಿಶ್ವ ದರ್ಜೆಯ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ನೀರು ಬಿಡುಗಡೆಯ ವ್ಯವಸ್ಥೆ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ.
ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹಣೆ (SCADA) ವ್ಯವಸ್ಥೆಯು ಜಲಾಶಯಕ್ಕೆ ಬರುವ ಒಳ ಹರಿವು ಹಾಗೂ ಜಲಾಶಯದಿಂದ ಹೊರಗೆ ಹೋಗುವ ಹೊರ ಹರಿವು ಎರಡನ್ನು ಟ್ರ್ಯಾಕ್ ಮಾಡುತ್ತದೆ. ಇದು ಪ್ರತಿಯೊಂದು ಕ್ರಸ್ಟ್ ಗೇಟ್ ಅಥವಾ ಸ್ಫೂಯಿಸ್ ಕಾರ್ಯಾಚರಣೆಯನ್ನು ಸ್ವಯಂ ಚಾಲಿತವಾಗಿ ಸಕ್ರಿಯಗೊಳಿಸುತ್ತದೆ.
ಕೆಆರ್ಎಸ್ ನಿರ್ಮಾಣವಾದ ಸಂದರ್ಭದಲ್ಲಿ ಎಸ್ಸಿಎಡಿಎ ವ್ಯವಸ್ಥೆ ಇತ್ತು ತರುವಾಯ ಸೂಕ್ತ ನಿರ್ವಹಣೆ ಮಾಡದ ಕಾರಣ ಕ್ರಸ್ಟ್ ಗೇಟ್ಗಳು ರಿಪೇರಿಗೆ ಬಂದು ಸ್ವಯಂಚಾಲಿತ ಕಾರ್ಯ ವಿಧಾನ ಗಳು ಸ್ಥಗಿತವಾಯಿತು. ಇದರಿಂದ ಈಗಲೂ ಕೂಡ ಗೇಟ್ ಗಳನ್ನು ಕೇಬಲ್ ಹಾಗೂ ರಾಟೆಯೊಂದಿಗೆ ಹಸ್ತಚಾಲಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ ಇದು ಸಮಯ ಗಣನೆ ಮತ್ತು ಕಡಿಮೆ ನಿಖರತೆ ವಿಧಾನ ವಾಗಿದೆ. ಈ ಹಿನ್ನೆಲೆ ಈಗ ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹಣೆ ವ್ಯವಸ್ಥೆಯನ್ನು 63 ಕೋಟಿ ವೆಚ್ಚದಲ್ಲಿ ಕಾರ್ಯ ರೂಪಕ್ಕೆ ತರಲಾಗುತ್ತಿದೆ.
ವಿಶ್ವದರ್ಜೆ ತಂತ್ರಜ್ಞಾನವಿರುವ ಎಸ್ಸಿಎಡಿಎ ಸಾಫ್ಟ್ವೇರ್ನಿಂದ ದೂರ ದಿಂದಲೇ ಗೇಟ್ಗಳನ್ನು ನಿಯಂತ್ರಿಸಬ ಹುದು. ಜೊತೆಗೆ ಮೇಲ್ವಿಚಾರಣೆ ಕೂಡ ಮಾಡಬಹುದು. ಇದಲ್ಲದೆ ಲೋಪ ದೋಷ ಪತ್ತೆ ಹಚ್ಚಬಹುದು, ಕಾರ್ಯಾ ಚರಣೆ ವೆಚ್ಚ ಕಡಿಮೆ ಮಾಡಬಹುದು, ಸಮಯ ಉಳಿತಾಯ ಮಾಡಬಹುದು ಹಾಗೂ ಅಣೆಕಟ್ಟೆಯ ನಿರ್ವಹಣೆಯ ನಿಖರತೆಯನ್ನು ಹೆಚ್ಚಿಸಬಹುದಾಗಿದೆ.
1911 ರಿಂದ 1932 ಅವಧಿಯಲ್ಲಿ ಕೆಆರ್ಎಸ್ ಜಲಾಶಯ ನಿರ್ಮಾಣವಾದಾಗ 172 ಕ್ರಸ್ಟ್ ಗೇಟ್ಗಳಿತ್ತು. ಇವೆಲ್ಲವೂ ಹಸ್ತಚಾಲಿತವಾಗಿ ನಿರ್ವಹಣೆ ಮಾಡಲಾಗು ತ್ತಿತ್ತು. ಇದರಲ್ಲಿ ಕೆಲವು ಗೇಟ್ಗಳು ಬಳಕೆಯಲ್ಲಿ ಇಲ್ಲದ ಕಾರಣ ಮುಚ್ಚಲ್ಪಟ್ಟವು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.
ಪ್ರಸ್ತುತ ಕೆಆರ್ಎಸ್ ಜಲಾಶಯದಲ್ಲಿ ವಿವಿಧ ಹಂತಗಳಲ್ಲಿ 153 ಕ್ರಸ್ಟ್ ಗೇಟ್ ಗಳಿವೆ. 2003ರಲ್ಲಿ 80 ಅಡಿ ಮಟ್ಟದಲ್ಲಿ 17 ಗೇಟ್ ಬದಲಾಯಿಸಲಾಯಿತು. 106 ಅಡಿಗಳಲ್ಲಿ 40 ಗೇಟ್, 103 ಅಡಿಗಳಲ್ಲಿ 48 ಗೇಟ್, 114 ಅಡಿಗಳಲ್ಲಿ 48 ಗೇಟ್ಗಳನ್ನು ಸೇರಿಸ ಲಾಗಿದ್ದು, ಒಟ್ಟು 153 ಗೇಟ್ಗಳಿವೆ ಎಂದ ಹೇಳಿದರು. ಈಗ ಕೆಆರ್ ಎಸ್ ಅಣೆಕಟ್ಟೆಯ ಪುನರ್ವಸತಿ ಮತ್ತು ಸುಧಾರಣಾ ಯೋಜನೆ (DRIP) ಯಲ್ಲಿ ಕ್ರೆಸ್ಟ್ ಗೇಟ್ ಗಳನ್ನು ಬದ ಲಾಯಿಸಲಾಗಿದೆ ಎಂದು ತಿಳಿಸಿದರು.
Comments are closed.