Karkala: ಕಾರ್ಕಳ: ಯುವಕನ ಬರ್ಬರ ಹ*ತ್ಯೆ!

Karkala: ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಮುಖ್ಯ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ನವೀನ ಪೂಜಾರಿ (50ವ)ಎಂಬ ಯುವಕನ ಬರ್ಬರ ಹತ್ಯೆಯಾಗಿದೆ.

ಎಸ್ ಜೆ ಆರ್ಕೇಡ್ ನಲ್ಲಿ ವಾಸವಾಗಿದ್ದು ಮೂಲತಃ ಮಂಗಳೂರಿನ ಪಡೀಲ್ ನಿವಾಸಿ ಆಗಿದ್ದು, ಈತ ಹಿಂದೆ ಚಾಲಕನಾಗಿ ವೃತ್ತಿ ಮಾಡುತ್ತಿದ್ದು ಬಡ್ಡಿ ವ್ಯವಹಾರ ಮಾಡುತ್ತಿದ್ದ.
ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ ಎಸ್ಪಿ ಡಾ| ಹರ್ಷ ಪ್ರಿಯಂ ವದ, ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯಕ, ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
Comments are closed.