London: ಭಾರತದ ಧ್ವಜ ಮುಟ್ಟಿದ ಪಾಕ್ ಹುಡುಗ – ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದ ಭಾರತೀಯ ಮುಸ್ಲಿಂ ಹುಡುಗಿಯರು !!


London: ಲಂಡನ್ ನಲ್ಲಿ ಭಾರತದ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ವೇಳೆ ಮುಸ್ಲಿಂ ಹುಡುಗನೊಬ್ಬ ಭಾರತದ ಧ್ವಜವನ್ನು ಮುಟ್ಟಿದ ಕಾರಣಕ್ಕೆ ರೊಚ್ಚಿಗೆದ್ದ ಭಾರತೀಯ ಮುಸ್ಲಿಂ ಹುಡುಗಿಯರು ಆತನಿಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಮಾಡಿದ್ದಾರೆ.
ಹೌದು, ಲಂಡನ್ ಬೀದಿಯಲ್ಲಿ ಮುಸ್ಲಿಂ ಹುಡುಗಿಯರು ಭಾರತದ ಧ್ವಜ ಹಿಡಿದು ಸ್ವತಂತ್ರೋತ್ಸವದ ಸಂಭ್ರಮವನ್ನು ಆಚರಿಸುವ ವೇಳೆ ಪಾಕಿಸ್ತಾನಿ ನಾಗರಿಕರು ಭಾರತೀಯರಿಂದ ತ್ರಿವರ್ಣ ಧ್ವಜವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ. ಆದರೆ ಭಾರತೀಯ ಮುಸ್ಲಿಂ ಯುವತಿಯರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ, “ಹಿಂದೂಸ್ತಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮುಸ್ಲಿಂ ಹುಡುಗಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಕೆಲವು ಪಾಕಿಸ್ತಾನಿ ಯುವಕರು ಬಂದು ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸುದ್ದಾರೆ. ಆದರೆ, ಭಾರತೀಯ ಹುಡುಗಿ ಹೆದರದೇ ಪಾಕಿಸ್ತಾನಿಗಳ ಜೊತೆ ಜಗಳವಾಡಿದ್ದಾರೆ.
Comments are closed.