Delhi : ದೆಹಲಿ ಸಿಎಂಗೆ ನನ್ನ ಮಗ ಕಪಾಳಕ್ಕೆ ಹೊಡೆದದ್ದೇಕೆ? ಸತ್ಯ ಬಿಚ್ಚಿಟ್ಟ ಆರೋಪಿ ತಾಯಿ!!


Dehli : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ಬುಧವಾರ ನಡೆದ ಜನ್ ಸುನಾಯಿ (ಜನ ಸ್ಪಂದನ ಕಾರ್ಯಕ್ರಮ) ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಆ ವ್ಯಕ್ತಿಯ ತಾಯಿ ನನ್ನ ಮಗ ಹೀಗೇಕೆ ಮಾಡಿದ ಎಂಬ ಕುರಿತು ಮಾತನಾಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ದೆಹಲಿಯಲ್ಲಿ ಬೀದಿನಾಯಿಗಳನ್ನು ಎಳೆದೊಯ್ಯುತ್ತಿರುವ ವಿಡಿಯೊ ನೋಡಿ ವಿಚಲಿತಗೊಂಡಿದ್ದ ಮಗ, ಉಜ್ಜಯಿನಿ ಹೋಗುವುದಾಗಿ ಹೇಳಿ ಮನೆ ತೊರೆದಿದ್ದ ಎಂದು ಅವರು ತಿಳಿಸಿದ್ದಾರೆ. ನನ್ನ ಮಗ ರಿಕ್ಷಾ ಚಾಲಕನಾಗಿದ್ದು, ನಾವು ಬಡವರು. ಹಾಗಾಗಿ, ನನ್ನ ಮಗನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾಗೆ ಮನವಿ ಮಾಡಿದ್ದಾರೆ.
ಅಲ್ಲದೆ ನನ್ನ ಮಗ ಮಹಾದೇವನ ಭಕ್ತ. ಉಜ್ಜಯಿನಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ತಿಂಗಳಿಗೊಮ್ಮೆಯಾದರೂ ಅಲ್ಲಿಗೆ ಭೇಟಿ ನೀಡುತ್ತಾನೆ. ಉಜ್ಜಯಿನಿಯಿಂದ ದೆಹಲಿಗೆ ಯಾವಾಗ ಬಂದನು ಎಂಬುದು ನನಗೆ ತಿಳಿದಿಲ್ಲ. ನಿನ್ನೆ ಅವರ ತಂದೆ ಕರೆ ಮಾಡಿ ಉಜ್ಜಯನಿಯಿಂದ ಯಾವಾಗ ಹಿಂದಿರುಗುತ್ತೀಯಾ ಎಂದು ಕೇಳಿದ್ದರು. ಬೀದಿನಾಯಿಗಳ ಕುರಿತಾದ ಹೋರಾಟಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದು ರಾಜೇಶ್ ತಂದೆಗೆ ತಿಳಿಸಿದ್ದನು. ನಮಗೆ ಬೇರೆ ಏನೂ ತಿಳಿದಿಲ್ಲ. ದಯವಿಟ್ಟು ಆತನನ್ನು ಕ್ಷಮಿಸಿ ಎಂದು ಅವರು ಬೇಡಿಕೊಂಡಿದ್ದಾರೆ.
Comments are closed.