Delhi: ದೆಹಲಿ ಸಿಎಂ ರೇಖಾ ಗುಪ್ತಾಗೆ ವ್ಯಕ್ತಿಯಿಂದ ಕಪಾಳಮೋಕ್ಷ!! ಆರೋಪಿ ಬಂಧನ

Share the Article

Dehli : ದೆಹಲಿ ಮುಖ್ಯಮಂತ್ರಿ ರೇಖಾ ಅವರಿಗೆ ಅನಾಮಿಕ ವ್ಯಕ್ತಿ ಒಬ್ಬ ಬಂದು ಕಪಾಳಮೋಕ್ಷ ಮಾಡಿದ್ದಾನೆ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ

ಹೌದು, ಬುಧವಾರ ದೆಹಲಿ ಸಿಎಂ ತಮ್ಮ ಅಧಿಕೃತ ನಿವಾಸದಲ್ಲಿ ಜನ್‌ ಸುನ್ವಾಯಿ (ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ) ದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಜೇಶ್‌ ದೂರುದಾರನಂತೆ ಅರ್ಜಿ ಹಿಡಿದು ಸರದಿಸಾಲಿನಲ್ಲಿ ಬಂದಿದ್ದ. ಸಿಎಂ ರೇಖಾ ಗುಪ್ತಾರನ್ನು ಭೇಟಿಯಾಗುವ ವೇಳೆ ಆತ ಕೂಗಾಡಲು ಪ್ರಾರಂಭಿಸಿದ್ದ. ಹಲ್ಲೆಗೂ ಮೊದಲು ಕಾಗದ ಪತ್ರಗಳನ್ನು ನೀಡಿದ್ದಾನೆ. ಬಳಿಕ ಕೂದಲು ಎಳೆದು ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಸಿಎಂ ರೇಖಾ ಗುಪ್ತಾರನ್ನು ರಕ್ಷಿಸಿದ್ದು, ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಂ ರೇಖಾ ಗುಪ್ತಾರ ಮೇಲಿನ ಹಲ್ಲೆಯನ್ನು ಬಿಜೆಪಿ ದೆಹಲಿ ಘಟಕ ತೀವ್ರವಾಗಿ ಖಂಡಿಸಿದೆ. ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಆರೋಪಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಆತ ತನಿಖೆ ವೇಳೆ ನನ್ನ ಮಗ ನಾಯಿಪ್ರೇಮಿಯಾಗಿದ್ದ ಎಂದು ತಾಯಿ ಹೇಳಿಕೆ ನೀಡಿದ್ದಾರೆ. ರಾಜೇಶ್‌ ಶ್ವಾನ ಪ್ರಿಯನಾಗಿದ್ದು, ದೆಹಲಿ ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಕೆಲವು ವರದಿಗಳ ಪ್ರಕಾರ, 41 ವರ್ಷದ ಸಕಾರಿಯಾ ತಮ್ಮ ಸಂಬಂಧಿಯನ್ನು ಬಂಧನ ಮಾಡಿದ್ದ ಕಾರಣಕ್ಕೆ ಮುಖ್ಯಮಂತ್ರಿಯ ಸಹಾಯ ಪಡೆಯಲು ಸಾರ್ವಜನಿಕ ಸಭೆಗೆ ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸರಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

pocso Case: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೊಕ್ಸೋ ಕೇಸ್ – ಆಗಸ್ಟ್ 23 ಕ್ಕೆ ವಿಚಾರಣೆ ನಿಗದಿ

Comments are closed.