Bogus Seat: ಉಚ್ಛಾಟಿತ ಶಾಸಕರಿಗೆ ವಿಧಾನಸಭೆಯಲ್ಲಿ ʼಬೋಗಸ್‌ʼ ಸೀಟು ಹಂಚಿಕೆ

Share the Article

Bogus Seats: ವಿಧಾನಸಭೆಯ ಹಿಂಬದಿಯ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಅವರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ವಿಧಾನಸಭೆಯಲ್ಲಿ 224,225,226ನೇ ಸಂಖ್ಯೆಯ ಆಸನವನ್ನು ನಮಗೆ ನೀಡಲಾಗಿದೆ. ಆದರೆ ವಿಧಾನಸಭೆಯಲ್ಲಿ 224, 225,226 ಸೀಟುಗಳು ಇಲ್ಲವೇ ಇಲ್ಲ. ಇವು ಬೋಗಸ್‌ ಆಸನಗಳಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಮೊದಲ ಸಾಲಿನಲ್ಲಿ ಪ್ರತಿಪಕ್ಷ, ಎರಡನೇ ಸಾಲಿನಲ್ಲಿ ಪ್ರಾದೇಶಿಕ ಪಕ್ಷದ ಶಾಸಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಜೊತೆ ಸೇರಿದ್ದು, ನಮ್ಮನ್ನು ಹೊಂದಾಣಿಕೆ ರಹಿತ ಪಕ್ಷದವರೆಂದು ಪರಿಗಣನೆ ಮಾಡಿ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಯತ್ನಾಳ್‌ ಆಗ್ರಹ ಮಾಡಿದ್ದಾರೆ.

Comments are closed.