Russia: ರಷ್ಯಾ ಅಧ್ಯಕ್ಷರ ಅಲಾಸ್ಕಾ ಭೇಟಿ: ಪುಟಿನ್’ರ ಮಲವನ್ನು ಸೂಟ್ ಕೇಸ್ ನಲ್ಲಿ ಹೊತ್ತು ತಿರುಗಿದ ಅಂಗರಕ್ಷಕರು!

Mascow: ಮಾಸ್ಕೋ: ಉಕ್ರೇನ್-ರಷ್ಯಾ ನಡುವಿನ ಸಂಘರ್ಷವನ್ನು ಕೊನೆಗಾಣಿಸುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರ್ಂಪ್ ಮತ್ತು ರಷ್ಟಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕದಲ್ಲಿ ನಡೆದ ಸಭೆಯು ಕೊನೆಗೊಂಡಿದೆ. ಈ ಸಂದರ್ಭ ಪ್ರವಾಸದಲ್ಲಿರುವ ಪುಟಿನ್’ರ ಅಂಗರಕ್ಷಕರು ಪುಟಿನ್ ರವರ ಮಲ ತ್ಯಾಜ್ಯವನ್ನು ಸಂಗ್ರಹಿಸಲು ‘ಮಲ ಸೂಟ್ಕೇಸ್’ (Poop suitcase) ಅನ್ನು ಹೊತ್ತೊಯ್ದಿದ್ದರು ಎಂದು ವಿದೇಶಿ ಪತ್ತೇದಾರಿ ಪತ್ರಿಕೆಗಳು ವರದಿ ಮಾಡಿದೆ.

ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ವಿದೇಶಿ ಶಕ್ತಿಗಳು ಮಾಹಿತಿ ಪಡೆಯುವುದನ್ನು ತಡೆಯಲು ಈ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ‘ವಿದೇಶಗಳಿಗೆ ಪುಟಿನ್ ಪ್ರಯಾಣಿಸಿದಾಗ ಮಾಡುವ ಮಲವನ್ನು ಆತನ ಅಂಗರಕ್ಷಕರು ರಷ್ಯಾಕ್ಕೆ ತರುತ್ತಾರೆ’ ಎಂದು ದಿ ಎಕ್ಸ್ಪ್ರೆಸ್ ಯುಎಸ್ ವರದಿ ಮಾಡಿದೆ. ಪುಟಿನ್ ರವರ ಅಲಾಸ್ಕ ಭೇಟಿಯ ಸಮಯದಲ್ಲಿ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆತನನ್ನು ಅಂಗರಕ್ಷಕರು ಸುತ್ತುವರೆದಿದ್ದರು ಮತ್ತು ರಷ್ಯಾದ ಗುಪ್ತಚರ ಇಲಾಖೆ ವಿಭಿನ್ನ ಕ್ರಮಗಳನ್ನು ತೆಗೆದುಕೊಂಡಿತ್ತು.
ತನಿಖಾ ಪತ್ರಕರ್ತರಾದ ಫ್ರೆಂಚ್ನ ಪ್ಯಾರಿಸ್ ಮ್ಯಾಚ್ನ ರೆಗಿಸ್ ಗೆಂಟೆ ಮತ್ತು ಮಿಖಾಯಿಲ್ ರೂಬಿನ್ ರವರ ಹೇಳಿಕೆ ಉಲ್ಲೇಖಿಸಿರುವ ದಿ ಎಕ್ಸ್ಪ್ರೆಸ್ ಯುಎಸ್ ಮಾಡಿರುವ ವರದಿ ಪ್ರಕಾರ, ರಷ್ಯಾದ ಅಧ್ಯಕ್ಷರ ಫೆಡರಲ್ ಪ್ರೊಟೆಕ್ಷನ್ ಸರ್ವಿಸ್ ಸಿಬ್ಬಂದಿಗಳು ಪುಟಿನ್ ರ ಮಲ ಸೇರಿದಂತೆ ಮಾನವ ತ್ಯಾಜ್ಯವನ್ನು ವಿಶೇಷ ಚೀಲಗಳಲ್ಲಿ ಸಂಗ್ರಹಿಸಿ, ಮೀಸಲಾದ ಬ್ರೀಫ್ಕೇಸ್ಗಳಲ್ಲಿ ಸಾಗಿಸುತ್ತಾರಂತೆ.
ಪುಟಿನ್ ರವರು, 1999 ರಲ್ಲಿ ಮೊದಲ ಬಾರಿ ಅಧ್ಯಕ್ಷರಾದ ನಂತರ ಈ ಅಭ್ಯಾಸ ಜಾರಿಯಲ್ಲಿದೆ ಎನ್ನಲಾಗಿದೆ. ಪುಟಿನ್ ಇಷ್ಟು ಜಾಗೃತೆ ವಹಿಸುವುದನ್ನು ಗಮನಿಸಿದರೆ, ಅವರಿಗೆ ಅದ್ಯಾವುದೋ ಗುರುತರ ಗಂಭೀರ ಅರೋಗ್ಯ ಸಮಸ್ಯೆ ಅಥವಾ ರೋಗಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
Heavy Rain: ಭಾರೀ ಮಳೆ ಹಿನ್ನೆಲೆ – ನಾಳೆ ಕೊಡಗು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
Comments are closed.