Dharmasthala case: ಸೌಜನ್ಯ ಕೇಸ್‌ ಮರುತನಿಖೆ ಮಾಡಿ – ಎಸ್ ಐಟಿ ತನಿಖೆಯಲ್ಲಿ ಕೈ ಹೈಕಮಾಂಡ್ ಕೈವಾಡ – ಶಾಸಕರಾದ ಪೂಂಜಾ, ಭರತ್‌ ಶೆಟ್ಟಿ ಉವಾಚ

Share the Article

Dharmasthala case: ನಿನ್ನೆ ಇಡೀ ದಿನದ ಮಳೆಗಾಲ ಅಧಿವೇಶನದ ಕೇಂದ್ರ ಬಿಂದು ಆಗಿದ್ದವರು ಬೆಳ್ತಂಗಡಿಯ ಶಾಸಕರಾದ ಹರೀಶ್‌ ಪೂಂಜಾ ಅವರು. ಅವರ ಹೇಳಿಕೆ ಇಡೀ ಸದನದಲ್ಲಿ ಗದ್ದಲ ಎಬ್ಬಿಸಿತ್ತು. ರಾಜ್ಯದಾದ್ಯಂತ ಜನರಿಗೆ, ಏನು ನಡಿತಾ ಇದೆ ಧರ್ಮಸ್ಥಳ ಪ್ರಕರಣ ಸಂಬಂಧ ಅನ್ನೋದು ಬಹುತೇಕ ಜನರಿಗೆ ಸ್ಪಷ್ಟವಾಯ್ತು. ಆದರೆ ಮಾನ್ಯ ಪೂಂಜಾ ಅವರು ತನಗೂ ಇದಕ್ಕು ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿ ತನ್ನ ಪಾಡಿಗೆ ತಾನು ಅಲ್ಲೆ ಸೀಟಿನಲ್ಲಿ ಕೂತು ತಮಾಷೆ ನೋಡುತ್ತಿದ್ದರು.

ಎಲ್ಲ ತನ್ನಗಾದ ಮೇಲೆ ಇಂದು ಸೌಜನ್ಯ ಕೇಸ್ ವಿಚಾರ ಮತ್ತೆ ಮರುತನಿಖೆ ಮನವಿ ಮಾಡಿದ್ದೆ. ಸರ್ಕಾರ ರಾಜ್ಯದ ಮುಂದೆ ಎಲ್ಲಾ ವಿಚಾರವನ್ನು ತೆಗೆದಿಡಬೇಕು. ಸತ್ಯಾ ಸತ್ಯತೆ ಏನು ಅನ್ನೋದನು ರಾಜ್ಯದ ಮುಂದೆ ಇಡಬೇಕು ಎಂದು ಇಷ್ಟು ದಿನ ಈ ವಿಚಾರವಾಗಿ ಮರೆತೇ ಹೋಗಿದ್ದ ಶಾಸಕರು ಇಂದು ಹೊಸ ಹೇಳಿಕೆ ನೀಡಿದ್ದಾರೆ.

ಇನ್ನು ಷಡ್ಯಂತ್ರ ಅನ್ನುವ ಡಿಸಿಎಂ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪೂಂಜಾ, ಯಾರೇ ಷಡ್ಯಂತ್ರ ಮಾಡಿದ್ರೆ ಅದು ಬಯಲಾಗಬೇಕು. ಸಮಾಜದ ಮುಂದೆ ಇಡುವಾಗ ಷಡ್ಯಂತ್ರ ಯಾರು ಮಾಡಿದ್ದಾರೆ ಅನ್ನೋದನ್ನ ಡಿಸಿಎಂ ಹೇಳಲಿ. ಎಸ್ಐಟಿ ತನಿಖೆ ವಿಚಾರ ಎಲ್ಲವೂ ಗೊತ್ತಾಗಲಿ ಎಂದರು.

ಇತ್ತೀಚಿಗೆ ಸೋಷಿಯಲ್ ಮೀಡಿಯಾ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಯೂಟ್ಯೂಬ್ ಚಾನಲ್ ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಸುದ್ದಿಯನ್ನ ಹರಡಿಸುವವರ ವಿರುದ್ದ ಕ್ರಮ ಆಗಬೇಕು. ಸರ್ಕಾರ ಆದಷ್ಟು ಬೇಗ ತನಿಗೆ ಮುಗಿಸಿ ರಾಜ್ಯದ ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಇನ್ನು ಇತ್ತ ದಕ್ಷಿಣ ಕನ್ನಡದ ಮತ್ತೊಬ್ಬ ಶಾಸಕ ಭರತ್ ಶೆಟ್ಟಿ ಮಾತನಾಡಿ, ಎಸ್ ಐಟಿ ತನಿಖೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೈವಾಡ ಏನಿದೆ ಅನ್ನೋದು ತಿಳಿಯಬೇಕು ಅನ್ನೋ ಹೊಸ ಪ್ರಶ್ನೆಯನ್ನು ಎತ್ತಿದ್ದಾರೆ. ಇವರಿಗೆ ಕಾಂಗ್ರಸ್‌ ಕೈವಾಡದ ಬಗ್ಗೆ ಮಾಹಿತಿ ಬೇಕು. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎನ್ನುವ ಬಗ್ಗೆ ಮಾಹಿತಿ ಬೇಡ ಅನ್ನುವ ರೀತಿ ಇದೆ ಶಾಸಕರ ಮಾತು.

ಎಸ್ ಐಟಿ ತನಿಗೆಯನ್ನ ನಾವು ಸ್ವಾಗತ ಮಾಡ್ತೇವೆ. ಧರ್ಮಸ್ಥಳದ ವಿರುದ್ದ ಇರುವರ ವಿರುದ್ದ ಯಾಕೆ ಸುಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬಾರದು? ಧರ್ಮಸ್ಥಳಕ್ಕೂ ಹಾಗೂ ಕೇರಳಕ್ಕೆ ಏನ್ ಸಂಬಂಧ ಇದೆ? ಇದರ ಹಿಂದೆ ಯಾರಿದ್ದಾರೆ ಅನ್ನೋದು ಬಯಲಾಗಬೇಕು ಎಂದು ಶಾಸಕ ಭರತ್‌ ಶೆಟ್ಟಿಯವರು ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

Karnataka Assembly: ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ’ ಅಂಗೀಕಾರ – ಇನ್ಮುಂದೆ ಮದುವೆ ಅಲ್ಲ, ನಿಶ್ಚಿತಾರ್ಥ ಮಾಡಿದ್ರೂ ಶಿಕ್ಷೆ ಕಟ್ಟಿಟ್ಟ ಬುತ್ತಿ

Comments are closed.