U P: ನಕಲಿ ಹೆಸರು ಹೇಳಿ, ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆರೋಪ: ಮಹಿಳೆಯಿಂದ ದೂರು ದಾಖಲು

Share the Article

Uttar Pradesh: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಿಳೆಯೊಬ್ಬರು, ತನ್ನ ಗುರುತನ್ನು ಸುಳ್ಳು ಹೇಳುವ ಮೂಲಕ ತನ್ನನ್ನು ವಂಚಿಸಿ, ನಂತರ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜ್‌ ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡ ವ್ಯಕ್ತಿಯನ್ನು ಈಕೆ ಭೇಟಿಯಾಗಿದ್ದು, ಮೊದಲಿಗೆ ಸ್ನೇಹಿತರಾಗಿದ್ದು, ನಂತರ ಆತ ಮದುವೆಯಾಗುವಂತೆ ಒತ್ತಡ ಹೇರಲು ಪ್ರಾರಂಭಿಸಿದ್ದು, ನಂತರ ಈಕೆಗೆ 2024 ರ ದೀಪಾವಳಿಯ ಸುಮಾರಿಗೆ ಬಡಾ ಇಮಾಂಬರಾಗೆ ಭೇಟಿ ನೀಡಿದಾಗ ಮಹಿಳೆಗೆ ಆತನ ನಿಜವಾದ ಹೆಸರು ಮೊಹಮ್ಮದ್‌ ಫುರ್ಖಾನ್‌ ಎಂದು ಗೊತ್ತಾಗಿದೆ.

ದೂರಿನಲ್ಲಿ, ಆರೋಪಿಯು ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲು ಪ್ರಯತ್ನಿಸಿದ್ದು, ಆಕೆ ನಿರಾಕರಿಸಿದ್ದಾಳೆ. ಹಾಗಾಗಿ ಆಕೆಯ ಮೇಲೆ ದೈಹಿಕ ಹಲ್ಲೆ, ಕತ್ತು ಹಿಸುಕಿ ಕೊಲೆ ಮಾಡಲು ಯತ್ನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಫರ್ಖಾನ್ ತನ್ನ ಅಶ್ಲೀಲ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆಗಸ್ಟ್ 7 ರಂದು, ಆರೋಪಿಯು ತನ್ನ ಬಾಡಿಗೆ ಮನೆಗೆ ಬಲವಂತವಾಗಿ ಪ್ರವೇಶಿಸಿ ಮತ್ತಷ್ಟು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ನಂತರ, ಆಗಸ್ಟ್ 11 ರಂದು, ಆಕೆ ಇಲ್ಲದಿದ್ದಾಗ, ಆಕೆಯ ಕೋಣೆಯ ಬೀಗವನ್ನು ಮುರಿದು 25,000 ರೂ. ನಗದನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೂರ್ವ ವಲಯದ ಡಿಸಿಪಿ ಶಶಾಂಕ್ ಸಿಂಗ್ ದೃಢಪಡಿಸಿದ್ದಾರೆ.

ಪ್ರಸ್ತುತ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ವಾಸಿಸುತ್ತಿರುವ 25 ವರ್ಷದ ಮಹಿಳೆ 2023 ರಲ್ಲಿ ಬಿಬಿಡಿ ವಿಶ್ವವಿದ್ಯಾಲಯದ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ತನ್ನ ತಂದೆಯ ಮರಣದ ನಂತರ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಆಗಸ್ಟ್ 2024 ರಲ್ಲಿ ಕಾಲೇಜು ಬಿಟ್ಟು, ಜೀವನಕ್ಕಾಗಿ ಸಣ್ಣ ಆಹಾರ ಅಂಗಡಿಯನ್ನು ಪ್ರಾರಂಭಿಸಿ ಜೀವನ ಸಾಗಿಸುತ್ತಿದ್ದಳು.

Comments are closed.