Poop protocol: ರಷ್ಯಾ ಅಧ್ಯಕ್ಷ ಪುಟಿನ್ ಮಲ-ಮೂತ್ರ ಸೂಟ್‌ಕೇಸ್‌ನಲ್ಲಿ ಭದ್ರ – ಹೋದಲ್ಲೆಲ್ಲಾ ಪುಟಿನ್‌ ಮಲ ಸಂಗ್ರಹಿಸುವ ಅಂಗರಕ್ಷಕರು

Share the Article

Poop protocol: ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಅಲಾಸ್ಕಾದ ಮಿಲಿಟರಿ ನೆಲೆಗೆ ಆಗಮಿಸಿದರು. ಈ ವೇಳೇ ಪುಟಿನ್ ವಿದೇಶ ಪ್ರವಾಸ ಮಾಡುವಾಗ ಅವರ ಅಂಗರಕ್ಷಕರು ಅವರ “ಮಲ” ಮತ್ತು ಮೂತ್ರವನ್ನು ಸಂಗ್ರಹಿಸಿ ರಷ್ಯಾಕ್ಕೆ ತರುತ್ತಿದ್ದಾರೆ ಎಂಬ ವರದಿಗಳು ಅಲಾಸ್ಕಾ ಭೇಟಿಯ ಸಮಯದಲ್ಲಿ ಮತ್ತೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ರಷ್ಯಾ ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಅವರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಲು ಅವರ ಅಂಗರಕ್ಷಕರು ಸೂಟ್‌ಕೇಸ್‌ಗಳನ್ನು ಹೊತ್ತೊಯ್ದರು. ವರದಿಗಳ ಪ್ರಕಾರ, ಭದ್ರತೆಗಾಗಿ 1999 ರಿಂದ ಈ ಕ್ರಮವನ್ನು ಅನುಸರಿಸಲಾಗುತ್ತಿದೆ, ಇದರಿಂದಾಗಿ ಇತರ ದೇಶಗಳು ಪುಟಿನ್ ಅವರ ಮಲ ಮತ್ತು ಮೂತ್ರದಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ.

ಪುಟಿನ್ ಅವರ ಮಲ ಮತ್ತು ಮೂತ್ರವು ಅವರ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಹೊರಹಾಕಬಹುದು. ಈ ಮೂಲಕ ರಷ್ಯಾದ ಅಧ್ಯಕ್ಷರ ತ್ಯಾಜ್ಯದ ಡೇಟಾವನ್ನು ವಿದೇಶಿ ಗುಪ್ತಚರ ಅಥವಾ ಗೂಢಚಾರ ಸಂಸ್ಥೆಗಳು ಸಂಗ್ರಹಿಸಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ಮೂಲಕ ಅವರ ದೈಹಿಕ ಸ್ಥಿತಿಯ ಬಗ್ಗೆ ಒಳನೋಟವನ್ನು ನೀಡುತ್ತದೆ ಮತ್ತು ಬಹುಶಃ ಇನ್ನೂ ಹೆಚ್ಚಿನದನ್ನು ನೀಡುತ್ತದೆ ಎಂದು ವರದಿ ಹೇಳುತ್ತದೆ.

” ವಿದೇಶದಲ್ಲಿ ವ್ಲಾಡಿಮಿರ್ ಪುಟಿನ್ ಜೊತೆಗಿರುವ ತಂಡದಲ್ಲಿ, ಒಬ್ಬ ವ್ಯಕ್ತಿಗೆ ಅವರ ನೈಸರ್ಗಿಕ ಮಲವನ್ನು ಸಂಗ್ರಹಿಸಿ ಮಾಸ್ಕೋಗೆ ಕೊಂಡೊಯ್ಯುವ ಕಾರ್ಯವನ್ನು ವಹಿಸಲಾಗಿದೆ. ಇದೆಲ್ಲವೂ ಅವರ ಮಲ ಮತ್ತು ಮೂತ್ರದ ಮೂಲಕ ಪ್ರಪಂಚಕ್ಕೆ ತನ್ನ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿಯಬಾರದು ಅನ್ನುವ ನಿಟ್ಟಿನಲ್ಲಿ ಇದನ್ನು ಮಾಡಲಾಗುತ್ತಿದೆ. ಅವರ ಸಂಭಾವ್ಯ ಚಿಕಿತ್ಸೆಗಳ ಹಲವು ಕುರುಹುಗಳನ್ನು ಮರೆಮಾಡಲಾಗಿದೆ. ಈ ನಿಟ್ಟಿನಲ್ಲಿ ಪುಟಿನ್ ಅವರ ತ್ಯಾಜ್ಯವನ್ನು ‘ಚೀಲ’ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. ಪುಟಿನ್ ಅವರ ಸೌದಿ ಅರೇಬಿಯಾ ಭೇಟಿಯ ನಂತರ ಅಕ್ಟೋಬರ್ 2019 ರಲ್ಲಿ ಈ ವಿಷಯದ ಬಗ್ಗೆ ಮೊದಲು ತಿಳಿಯಿತು ಎಂದು ಪ್ಯಾರಿಸ್ ಮ್ಯಾಚ್ ವರದಿ ಹೇಳುತ್ತದೆ.

Tata Motors: ಟಾಟಾ ಮೋಟರ್ಸ್ ಮತ್ತೆ ಲಾಂಚ್ ಮಾಡಿದ ರಗಡ್ ಸ್ಟೈಲೀಶ್ ಟಾಟಾ ಸುಮೋ! ಇದರ ವಿಶೇಷತೆ ನಿಮಗೆ ಖಂಡಿತಾ ಇಷ್ಟವಾಗುತ್ತೆ!

Comments are closed.