Dharmasthala Case: ಧರ್ಮಸ್ಥಳ ಪ್ರಕರಣ – ಸದನದಲ್ಲಿ ಚರ್ಚೆ ಹಿನ್ನೆಲೆ – ಪ್ರಣವ್‌ ಮೊಹಂತಿ – ಗೃಹಸಚಿವರ ಭೇಟಿ

Share the Article

Dharmasthala Case: ಧರ್ಮಸ್ಥಳ ಪ್ರಕರಣ ಸಂಬಂಧ ಸದನದಲ್ಲಿ ಇಂದು ಚರ್ಚೆ ಮೇಲೆ ಸರ್ಕಾರ ‌ಉತ್ತರ ನೀಎಲಿದೆ. ಬಿಜೆಪಿ ನಾಯಕರು ಮಧ್ಯಂತರ ವರದಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉತ್ತರ ನೀಡುವ ಮುನ್ನ ಎಸ್‌ಐಟಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲು ಮುಂದಾಗಿದೆ.

ಪ್ರಣವ್ ಮೊಹಾಂತಿ ಜೊತೆ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಲಿದ್ದು, ಗೃಹ ಸಚಿವ ಪರಮೇಶ್ವರ್ ಭೇಟಿಗೆ ಪ್ರಣವ್ ಮೊಹಾಂತಿ ಕಾಯುತ್ತಿದ್ದಾರೆ. ವಿಧಾನಸೌಧದ ಗೃಹ ಸಚಿವ ಪರಮೇಶ್ವರ್ ಕೊಠಡಿಯಲ್ಲಿ ಪ್ರಣಾವ್ ಮೊಹಾಂತಿ ಕಾದು ಕುಳುತಿದ್ದು, ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಅದರ ಮೇಲೆ ಗೃಹ ಸಚಿವರು ಸದನಕ್ಕೆ ಮುಂದಿನ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್.ಕೆ‌. ಪಾಟೀಲ್‌ ಮಾತನಾಡಿ, ಎಲ್ಲಾ ಪ್ರಶ್ನೆಗಳಿಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ. ಉತ್ತರವನ್ನು ಸದನಲ್ಲಿ ಕೊಡ್ತಿವಿ. ರಾಜಕಾರಣಕ್ಕಾಗಿ ಬಿಜೆಪಿಯವರು ಆರೋಪ ಮಾಡ್ತಾರೆ. ಇದರಲ್ಲಿ ರಾಜಕಾರಣ ಮಾಡುವುದವುದು ಸೂಕ್ತವಲ್ಲ. ನಾವೆಲ್ಲ ಧರ್ಮಸ್ಥಳದ ಮೇಲೆ ನಂಬಿಕೆ ಇಟ್ಟವರು ಎಂದು ಹೇಳಿದರು.

Parliament : ಇನ್ನು ಮುಂದೆ ಸಣ್ಣ ಪುಟ್ಟ ತಪ್ಪು ಮಾಡಿದವರಿಗೆ ಇಲ್ಲ ಜೈಲು ಶಿಕ್ಷೆ – ಮಸೂದೆ ತಿದ್ದುಪಡೆಗೆ ಕೇಂದ್ರ ಸಿದ್ಧತೆ

Comments are closed.