Mangalore: ಮಂಗಳೂರು: ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ಗುಳುಂ!

Share the Article

Mangalore: ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ದೋಚಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಹೆಸರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ಹತ್ತು ಕೋಟಿಗೂ ಹೆಚ್ಚು ಪೀಕಿಸಿದ್ದಾನೆಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಂಪನಿಯ ಪ್ರೊಪ್ರೈಟರ್ ಮೊಹಮ್ಮದ್ ಅಶ್ರಫ್ ಮತ್ತು ಮ್ಯಾನೇಜರ್ ಆಗಿದ್ದ ಹನೀಫ್ ಬಂಧಿತ ಆರೋಪಿಗಳು.

ಇವರು ಬಜಪೆಯವರಾಗಿದ್ದು ನ್ಯೂ ಇಂಡಿಯಾ ರಾಯಲ್ ಹೆಸರಿನಲ್ಲಿ ಕಾಟಿಪಳ್ಳದಲ್ಲಿ ಕಚೇರಿ ತೆರೆದು ಲಕ್ಕಿ ಸ್ಕೀಮ್ ನಡೆಸುತ್ತಿದ್ದರು. ಸಂಸ್ಥೆಯ ಹೆಸರಿನಲ್ಲಿ ಪ್ರತಿ ತಿಂಗಳು ಒಂದು ಸಾವಿರ ಕಟ್ಟಿದರೆ ದುಬಾರಿ ಕಾರು, ಫ್ಲಾಟ್, ದ್ವಿಚಕ್ರ ವಾಹನ, ಬಂಗಾರದ ಸರ ಇನ್ನಿತರ ಗಿಫ್ಟ್ ಸಿಗುತ್ತೆ ಎಂದು ನಂಬಿಸುತ್ತಿದ್ದರು. ಏಜಂಟರ ಮೂಲಕ ಕಳೆದ ಐದಾರು ವರ್ಷಗಳಲ್ಲಿ 15ಕ್ಕೂ ಹೆಚ್ಚು ಸೀಸನ್ ನಡೆಸಿದ್ದು, ಈ ಬಾರಿಯ ಸೀಸನ್ ಕಳೆದ ಎಪ್ರಿಲ್ ತಿಂಗಳಿಗೆ ಮುಗಿದಿತ್ತು. 12 ತಿಂಗಳ ಡ್ರಾ ಫಲಿತಾಂಶದಲ್ಲಿ ಕೂಪನ್ ಗೆಲ್ಲದವರಿಗೆ ವರ್ಷದ ಕೊನೆಯಲ್ಲಿ ಬಡ್ಡಿ ಸಹಿತ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ ಈ ಬಾರಿ ಹಣ ಹಿಂತಿರುಗಿಸುವ ಬದಲು ಮೇ ತಿಂಗಳ ಕೊನೆಯಲ್ಲಿ ಕಾಟಿಪಳ್ಳದ ಕಚೇರಿಯನ್ನೇ ಕ್ಲೋಸ್ ಮಾಡಿ ಎಸ್ಕೇಪ್ ಆಗಿದ್ದರು.

ಇದರಿಂದ ಚಿಂತೆಗೆ ಒಳಗಾದ ಸಂತ್ರಸ್ತರು ಮೊಹಮ್ಮದ್ ಅಶ್ರಫ್ ಪತ್ತೆಗೆ ಮುಂದಾಗಿದ್ದರು. ಆದರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಶ್ರಫ್ ಪರಾರಿಯಾಗಿದ್ದ.

ಇದೀಗ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ನ್ಯೂ ಇಂಡಿಯಾ ರಾಯಲ್ ಹೆಸರಲ್ಲಿ ಹಣ ಕಟ್ಟಿ ಮೋಸ ಹೋಗಿರುವ ಭುಜಂಗ ಪೂಜಾರಿ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.

Comments are closed.