Darshan: ದರ್ಶನ್ ಗೆ ಮತ್ತೆ ಕಾಡಿದ ಬೆನ್ನುನೋವು! ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

Share the Article

Darshan: ನಟ ದರ್ಶನ್ (Darshan) ಜಾಮೀನು ರದ್ದಾದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದ್ದಾರೆ. ಕಳೆದ ಗುರುವಾರ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಕೋರ್ಟ್ಗೆ ಹಾಜರು ಪಡಿಸುವುದಕ್ಕೂ ಮುನ್ನ ಆರೋಗ್ಯ ತಪಾಸಣೆಯಲ್ಲಿ ಒಂದಷ್ಟು ವ್ಯತ್ಯಾಸ ಕಂಡು ಬಂದಿದ್ದು ಬಿಪಿ ಸಮಸ್ಯೆ ಆಗಿತ್ತು. ಮತ್ತೆ ಬೆನ್ನು ನೋವಿದೆ (Backpain) ಅಂತಾ ವೈದ್ಯಕೀಯ ತಪಾಸಣೆ ಮಾಡಿದವರಿಗೆ ದರ್ಶನ್ ಹೇಳಿದ್ದರು ಎನ್ನಲಾಗಿದೆ.

ನಟ ದರ್ಶನ್‌ಗೆ ಬೆನ್ನು ನೋವು ಇದ್ದು, ಈಗ ಬೆನ್ನು ನೋವಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಈ ಹಿಂದೆ ಬೆನ್ನು ನೋವಿಗೆ ಏನು ಔಷಧಿಯನ್ನು ತೆಗೆದುಕೊಳ್ತಾ ಇದ್ರೋ ಅದೇ ಮಾದರಿಯಲ್ಲೇ ಚಿಕಿತ್ಸೆ ಮತ್ತು ಔಷಧಿಯನ್ನ ವೈದ್ಯರು ನೀಡ್ತಾ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ದರ್ಶನ್ ಆರೋಗ್ಯ ಸುಧಾರಣೆ ಆಗಿದ್ದು, ಜೈಲಿನಲ್ಲೇ ಬೆನ್ನು ನೋವಿಗೆ ಟ್ರೀಟ್‌ಮೆಂಟ್ ನೀಡಲಾಗ್ತಿದೆ.

Comments are closed.