Gold Rate hike: ಸ್ವಾತಂತ್ರ್ಯದ ಸಮಯದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಏರಿಕೆಯ ಪ್ರಮಾಣ ಕಂಡರೆ ದಂಗಾಗುತ್ತೀರಿ!

Share the Article

Gold Rate hike: 1947ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ ₹88ರಷ್ಟಿತ್ತು, ಅದು ಈಗ 10 ಗ್ರಾಂಗೆ ಸುಮಾರು ₹1 ಲಕ್ಷವಾಗಿದೆ. ಇದಲ್ಲದೆ, 1947ರಲ್ಲಿ, ಶುದ್ಧ ತುಪ್ಪವನ್ನು ಪ್ರತಿ ಕಿಲೋಗ್ರಾಂಗೆ ₹2.5ಕ್ಕೆ ಮಾರಾಟ ಮಾಡಲಾಗುತ್ತಿತ್ತು ಮತ್ತು ಹಾಲು ಲೀಟರ್‌ಗೆ 12 ಪೈಸೆಗೆ ಮಾರಾಟವಾಗುತ್ತಿತ್ತು. ಅದೇ ಸಮಯದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 27 ಪೈಸೆಯಾಗಿದ್ದರೆ ದೆಹಲಿ ಮತ್ತು ಮುಂಬೈ ನಡುವಿನ ವಿಮಾನ ದರ ₹140 ಆಗಿತ್ತು.

1950-60ರ ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಳಿತಗಳು ಕಂಡವು. 1950ರಲ್ಲಿ ಬೆಲೆ 90ರಿಂದ 112ರೂ.ಗಳವರೆಗೆ ಇತ್ತು. ನಂತರ 1964ರಲ್ಲಿ ಅದು 93.25ರೂ.ಗಳಿಗೆ ಇಳಿಯಿತು, ಆದರೆ ದಶಕದ ಅಂತ್ಯದಲ್ಲಿ 176ರೂ.ಗಳಿಗೆ ಏರಿತು. 1970ರ ದಶಕದಲ್ಲಿ ಚಿನ್ನದ ಬೆಲೆಯಲ್ಲಿ ಮೊದಲ ದೊಡ್ಡ ಜಿಗಿತ ಕಂಡಿತು. ಅದು 184 ರೂಗೆ ಏರಿತು. ನಂತರ 1975ರಲ್ಲಿ 540 ರೂ. ಮತ್ತು 1979ರಲ್ಲಿ 10 ಗ್ರಾಂಗೆ 637ರೂ.ಗೆ ಬೆಲೆ ಏರಿತು. ಪ್ರಪಂಚದಾದ್ಯಂತದ ಆರ್ಥಿಕ ಪ್ರಕ್ಷುಬ್ಧತೆಯಿಂದ ಇದು ಪ್ರಭಾವಿತವಾಯಿತು.

1980-1990ರ ನಡುವನ್ನು ಹೂಡಿಕೆಯ ಹೊಸ ಯುಗ ಎಂದೇ ಹೇಳಬಹುದು. 1980ರಲ್ಲಿ 1333ರೂ., 1985ರಲ್ಲಿ 2130ರೂ. ಮತ್ತು 1990ರಲ್ಲಿ 10 ಗ್ರಾಂಗೆ 3200ರೂ. ಏರಿಕೆ ಕಂಡಿತು. ಚಿನ್ನ ಈಗ ಹೂಡಿಕೆಯ ಜನಪ್ರಿಯ ಸಾಧನವಾಗಿ ಬೆಳೆಯಿತು.

2000ದ ದಶಕದಲ್ಲಿ ತ್ವರಿತ ಗತಿಯಲ್ಲಿ ಏರಿಕೆ ಕಂಡು 2000 ರಲ್ಲಿ ರೂ 4,400, 2005 ರಲ್ಲಿ ರೂ 7,000 ಮತ್ತು 2010 ರ ವೇಳೆಗೆ 10 ಗ್ರಾಂಗೆ ರೂ 18,500ಕ್ಕೆ ಏರಿತು. ಈ ವೇಳೆ ಹಣದುಬ್ಬರ ಮತ್ತು ಹೂಡಿಕೆಯ ಬಯಕೆಯಿಂದಾಗಿ ಚಿನ್ನವು ಹೆಚ್ಚು ದುಬಾರಿಯಾಯಿತು.

ಇನ್ನು 2008-2025ರಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಚಿನ್ನದ ಹೊಳಪು ಹೆಚ್ಚಾಯ್ತು. 2008ರ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನವನ್ನು “ಸುರಕ್ಷಿತ ತಾಣ” ಎಂದು ಪರಿಗಣಿಸಲಾಗಿತ್ತು. ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿತು.

2020ರಲ್ಲಿ ಕೊರೊನಾ ಅವಧಿಯಲ್ಲಿ ಚಿನ್ನ ದಾಖಲೆಯ ಏರಿಕೆ ಕಂಡಿತು. ಕೋವಿಡ್-19 ಸಮಯದಲ್ಲಿ ಜನರು ಚಿನ್ನದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಬೆಲೆಗಳು 50,000 ರೂ. ದಾಟಿ 60,000 ರೂ.ಗೆ ತಲುಪಿದವು.

ಇದೀಗ 2025ರಲ್ಲಿ 10 ಗ್ರಾಂ ಚಿನ್ನ 1 ಲಕ್ಷ ರೂ. ದಾಟಿತು. ಇತಿಹಾಸದಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ 10 ಗ್ರಾಂಗೆ 1,00,000 ರೂ. ತಲುಪಿತು. ಇದು ಭಾರತೀಯ ಹೂಡಿಕೆ ಇತಿಹಾಸದಲ್ಲಿ ಅತಿ ದೊಡ್ಡ ಜಿಗಿತವಾಗಿದೆ.

Fee hike: ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದ ಪ್ರವೇಶ-ದೋಣಿ ವಿಹಾರ ಶುಲ್ಕ ಹೆಚ್ಚಳ

Comments are closed.