Mandya: ಧರ್ಮಸ್ಥಳ ಪ್ರಕರಣ – ಮಂಡ್ಯದಲ್ಲಿ ಮತ್ತೊಬ್ಬ ‘ಮುಸುಕುದಾರಿ ಭೀಮ’ ಪ್ರತ್ಯಕ್ಷ !!

Share the Article

Mandya: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿರುವ ಪ್ರಕರಣವನ್ನು SIT ತಂಡ ತನಿಖೆ ನಡೆಸುತ್ತಿದೆ. ಮಾಸ್ಕ್ ಮ್ಯಾನ್ ತೋರಿಸುತ್ತಿರುವ ಸ್ಥಳಗಳನ್ನು ಅಗೆದು ಅಗೆದು ಶೋಧ ನಡೆಸುತ್ತಿದೆ. ಇದರ ನಡುವೆಯೇ ಮಂಡ್ಯದಲ್ಲಿ ಒಬ್ಬ ಮುಸುಕುದಾರಿ ವ್ಯಕ್ತಿ ಪತ್ತೆಯಾಗಿದ್ದಾನೆ.

ಹೌದು, ಧರ್ಮಸ್ಥಳದಲ್ಲಿ ನಾನು ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ತನಿಖೆ ಎದುರಿಸುತ್ತಿರುವ ಮುಸುಕು ದಾರಿ ವ್ಯಕ್ತಿಯಂತೆಯೇ ಮಂಡ್ಯದಲ್ಲಿ ಒಬ್ಬ ಮುಸುಕು ದಾರಿ ಪ್ರತ್ಯಕ್ಷವಾಗಿದ್ದಾನೆ. ಆದ್ರೆ ಈತ ‘ನಾನು ಅನಾಮಿಕ (ಭೀಮ), ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡಲು ಬಂದಿದ್ದೇನೆ’ ಎಂಬರ್ಥದ ಭಿತ್ತಿಚಿತ್ರವನ್ನು ಕೊರಳಿಗೆ ಹಾಕಿಕೊಂಡು ಜರ್ಕಿನ್‌ ಮತ್ತು ಮುಖಕ್ಕೆ ಮಾಸ್ಕ್‌ ಧರಿಸಿ ಧರ್ಮಸ್ಥಳ ಪರ ಹೋರಾಟಗಾರರಿಗೆ ಬೆಂಬಲವನ್ನು ನೀಡಿದ್ದಾನೆ.

ಅಂದಹಾಗೆ ಹಿಂದೂ ಮುಖಂಡ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಧರ್ಮಸ್ಥಳದ ನಂಬಿಕೆ ಮತ್ತು ಭಕ್ತಿಯನ್ನು ಕಾಪಾಡುವಂತೆ ಆಗ್ರಹಿಸಲಾಯಿತು. ಧರ್ಮಸ್ಥಳ, ಹಿಂದೂಗಳ ಆಸ್ಥೆಯ ಕೇಂದ್ರವಾಗಿದ್ದು, ಇದರ ಪಾವಿತ್ರ್ಯತೆಯನ್ನು ಕೆಲವರು ಉತ್ಖನನದ ಹೆಸರಿನಲ್ಲಿ ಹಾಳುಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ’ ಎನ್ನುವ ಮುಸುಕುಧಾರಿ ಅನಾಮಿಕ ಭೀಮನನ್ನು ಅಣಕಿಸುವಂತೆ ಮಂಡ್ಯದ ಮುಸುಕುಧಾರಿ ವ್ಯಕ್ತಿ ಕಾಣಿಸಿಕೊಂಡ. ಈತನ ಜೊತೆ ಬಂದಿದ್ದ ಕಾರ್ಯಕರ್ತರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಬರೆದಿದ್ದ ‘ರಕ್ತದಲ್ಲಿ ಬೆರಳಚ್ಚಿನ ಸಹಿ ಹಾಕಿದ್ದ ಪತ್ರ’ವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.

Comments are closed.