Home News Weight Loss: ದೇಹದ ತೂಕವನ್ನು ಕಡಿಮೆ ಮಾಡಬೇಕೇ? ತೊಗರಿ, ಕಡಲೆ, ಹೆಸರುಕಾಳಿಗಿಂತಲೂ ಈ ಧಾನ್ಯ ಉತ್ತಮ

Weight Loss: ದೇಹದ ತೂಕವನ್ನು ಕಡಿಮೆ ಮಾಡಬೇಕೇ? ತೊಗರಿ, ಕಡಲೆ, ಹೆಸರುಕಾಳಿಗಿಂತಲೂ ಈ ಧಾನ್ಯ ಉತ್ತಮ

Hindu neighbor gifts plot of land

Hindu neighbour gifts land to Muslim journalist

Weight Loss: ದೇಹಕ್ಕೆ ಪ್ರೋಟೀನ್ ಒದಗಿಸಲು ಅನೇಕ ಜನರು ದ್ವಿದಳ ಧಾನ್ಯಗಳಾದ ತೊಗರಿ, ಉದ್ದಿನಬೇಳೆ, ಚೆನ್ನಂಗಿ, ಕಡಲೆ ಮತ್ತು ಬಟಾಣಿಗಳನ್ನು ಸೇವಿಸುತ್ತಾರೆ. ಆದರೆ ಅವೆಲ್ಲಕ್ಕಿಂತ ಹುರುಳಿ (ಹಾರ್ಸ್ ಗ್ರಾಂ) ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹುರುಳಿ ಕಾಳುಗಳು ಇತರ ದ್ವಿದಳ ಕಾಳುಗಳಷ್ಟು ರುಚಿಯನಿಸುವುದಿಲ್ಲ. ಆದ್ದರಿಂದ, ಹೆಚ್ಚಿನ ಜನ ಹುರುಳಿ ಕಾಳುಗಳನ್ನು ಇಷ್ಟಪಡುವುದಿಲ್ಲ. ಆದರೆ, ಹುರುಳಿ ಕಾಳುಗಳಿಂದ ದೇಹಕ್ಕೆ ಹೆಚ್ಚು ಪ್ರೊಟೀನ್ ಸಿಗುತ್ತದೆ.

ಹುರುಳಿಯನ್ನು ಮುಖ್ಯವಾಗಿ ದಕ್ಷಿಣದವರು ತಮ್ಮ ಆಹಾರದಲ್ಲಿ ಬಳಸುತ್ತಾರೆ. ಈ ಕಾಳು ಲೆಂಟಿಲ್ ದಾಲ್ ನಂತೆ ಕಾಣುತ್ತದೆ. ಆದರೆ ಅದನ್ನು ಸೇವಿಸುವುದರಿಂದ ಪ್ರೋಟೀನ್ ಹೊರತುಪಡಿಸಿ, ದೇಹಕ್ಕೆ ಇತರ ಆರೋಗ್ಯ ಪ್ರಯೋಜನಗಳೂ ಸಹ ದೊರೆಯುತ್ತವೆ. ದೇಹಕ್ಕೆ ಪ್ರೋಟೀನ್ ಪಡೆಯಲು ನಾವು ಬೇಳೆಗಳನ್ನು ತಿನ್ನುತ್ತೇವೆ. ಆದರೆ ಇತರ ಬೇಳೆಕಾಳುಗಳಿಗೆ ಹೋಲಿಸಿದರೆ ಹುರುಳಿ ಕಾಳುಗಳಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚು.

ಇಶಾ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್ ಹೇಳುತ್ತಾರೆ, ‘ಹುರುಳಿಕಾಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಮಾತ್ರವಲ್ಲದೆ, ಅನೇಕ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು ಈ ಬೆಳೆ ಕಾಳಿನ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ಹುರುಳಿ ಕಾಳುಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಮೊಳಕೆಯೊಡೆದ ಹುರುಳಿ ಕಾಳುಗಳನ್ನು ತಿನ್ನಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಮೊಳಕೆಯಾದ ಹುರುಳಿಕಾಳಿನ ಪ್ರಯೋಜನಗಳು

ಹುರುಳಿ ಕಾಳಿನಲ್ಲಿ ಪ್ರೊಟೀನ್ ಅಧಿಕವಾಗಿದೆ. ಅದರ ಗುಣಲಕ್ಷಣಗಳಿಂದಾಗಿ, ದೇಹವು ಒಳಗಿನಿಂದ ಬಿಸಿಯಾಗುತ್ತದೆ. ಹಾಗಾಗಿ ಯಾವಾಗಲೂ ಮೊಳಕೆ ಒಡೆದ ಹುರುಳಿ ಕಾಳುಗಳನ್ನೇ ತಿನ್ನಿ. ಇದರಿಂದ ಈ ಬೇಳೆ ಸುಲಭವಾಗಿ ಜೀರ್ಣವಾಗುತ್ತದೆ.

ದೇಹದ ಉಷ್ಣತೆಯನ್ನು ಉಂಟುಮಾಡುತ್ತದೆ

ಹುರುಳಿಯಂತಹ ದ್ವಿದಳ ಧಾನ್ಯಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ. ಇದು ಸ್ನಾಯುಗಳ ನಿರ್ಮಾಣ ಮತ್ತು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಅಂದರೆ ಆರೋಗ್ಯಕರ ತೂಕ ಪಡೆಯಬಹುದಾಗಿದೆ. ನೀವು ದೇಹದಲ್ಲಿನ ಶಾಖವನ್ನು ಸಮತೋಲನಗೊಳಿಸಲು ಬಯಸಿದರೆ, ನೀವು ಹುರುಳಿ ಕಾಳುಗಳನ್ನು ತಿಂದ ನಂತರ ಮೊಳಕೆ ಒಡೆದ ಹಸಿರು ಹೆಸರು ಕಾಳುಗಳನ್ನು ತಿನ್ನಬಹುದು. ಹಸಿ ಹೆಸರು ಕಾಳುಗಳು ಕೂಡ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ.

ತೂಕ ಇಳಿಕೆಗೆ ಸಹಾಯಕ

ಹುರುಳಿಕಾಳಿನಲ್ಲಿ ಪ್ರೊಟೀನ್ ಮತ್ತು ಫೈಬರ್ ಅಧಿಕವಾಗಿದೆ. ಇದರಲ್ಲಿ ಕಂಡುಬರುವ ಅಂಶಗಳು ಕೊಬ್ಬನ್ನು ಕರಗಿಸುವ ಕಾರ್ಯ ನಿರ್ವಹಿಸುತ್ತವೆ. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಕಾಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಹುರುಳಿ ಕಾಳುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಸಹ ಸುಧಾರಿಸುತ್ತದೆ. ಒಟ್ಟಾರೆಯಾಗಿ, ಈ ದ್ವಿದಳ ಧಾನ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

l

ಹೃದಯಕ್ಕೆ ಒಳ್ಳೆಯದು

ಈ ಕಾಳುಗಳು ಲಿಪಿಡ್ ಮತ್ತು ನಾರಿನ ಅಂಶವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಹೃದಯದ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ರಕ್ತ ಪರಿಚಲನೆಯಲ್ಲಿ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಹೃದಯವು ಆರೋಗ್ಯವಂತವಾಗಿ ಕಾರ್ಯನಿರ್ವಹಿಸುತ್ತದೆ.

ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮ

ಹುರುಳಿ ಕಾಳಿನಲ್ಲಿರುವ ಪೌಷ್ಟಿಕಾಂಶಗಳು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತವೆ ಮತ್ತು ಮೂತ್ರಪಿಂಡಗಳಲ್ಲಿನ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯಕವಾಗಿವೆ. ಜೊತೆಗೆ, ಮೂತ್ರದ ಹರಳುಗಳನ್ನು ಕರಗಿಸಲು ಸಹ ಪ್ರಯೋಜನಕಾರಿಯಾಗಿವೆ.

ಸಂಗ್ರಹ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

Akhand India: ಅಖಂಡ ಭಾರತ ದುರಂತ ವಿಭಜನೆ ಕರಾಳ ದಿನ – ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ