Dharmasthala: ಧರ್ಮಸ್ಥಳಕ್ಕೆ ಹೋಗಿದ್ದ ಬಂಟ್ವಾಳದ ಹೇಮಾವತಿ ಕಾಣೆಯಾದ ಪ್ರಕರಣ: 12ವರ್ಷಗಳ ನಂತರ SIT ಗೆ ದೂರು ನೀಡಿದ ಅಣ್ಣ!

Share the Article

Dharmasthala: 12 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಕವಳಮುಡೂರು ಗ್ರಾಮದ ಹೇಮಾವತಿ ಧರ್ಮಸ್ಥಳಕ್ಕೆ ಹೋದವರು ಕಾಣೆಯಾಗಿದ್ದಾರೆ.

ಇದುವರೆಗೂ ಯಾವುದೇ ಮಾಹಿತಿ ಇಲ್ಲದ ಕಾರಣ ಆ.14ರಂದು ಎಸ್. ಐ. ಟಿ ಕಛೇರಿಗೆ ಅಣ್ಣ ನಿತಿನ್ ದೂರು ನೀಡಲು ಭೇಟಿ ನೀಡಿದ್ದಾರೆ.

ಸ್ಥಳೀಯ ಮನೆಯವರ ಜೊತೆಗೆ ತೆರಳಿದ್ದ ತಂಗಿ ವಾಪಸ್ಸು ಬಾರದೆ ಇದ್ದ ಸಂದರ್ಭದಲ್ಲಿ ಹತ್ತಿರ ಮನೆಯವರಲ್ಲಿ ಕೇಳಿದಾಗ ನನ್ನ ಜೊತೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಧರ್ಮಸ್ಥಳದಿಂದ ಹೋಗಿ ಅವರ ಮೊಬೈಲ್‌ ಸಂಖ್ಯೆಯಲ್ಲಿ ನನಗೆ ಕರೆ ಮಾಡಿರುತ್ತಾರೆ ಇದರಿಂದ ನನಗೆ ತಿಳಿದು ಬಂದಿದೆ.

ನಾವು ಕಾಣೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಗೊತ್ತಾದರೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಈವರೆಗೆ ನಮಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಆದ ಕಾರಣ ಎಸ್.ಐ.ಟಿ ಮೇಲೆ ನಂಬಿಕೆ ಇಟ್ಟು ನಾವು ದೂರು ನೀಡಲು ಬಂದಿದ್ದೇವೆ. ಎಂದು ದೂರು ನೀಡಿದ್ದಾರೆ.

D K Shivkumar : ಧರ್ಮಸ್ಥಳದ ಪ್ರಕರಣದಲ್ಲಿ ಭಾರಿ ಷಡ್ಯಂತ್ರ, ಯಾರದ್ದು ಅಂದ್ರೆ… – ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

Comments are closed.