Session: ವಿಧಾನ ಮಂಡಲ ಅಧಿವೇಶನ – ಕರ್ನಾಟಕದ ದೇವಸ್ಥಾನಗಳಲ್ಲಿ‌ ಕನ್ನಡದಲ್ಲಿ ಮಂತ್ರ ಹೇಳಿಸಿ – ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಆಗ್ರಹ

Share the Article

Session: ಕರ್ನಾಟಕ ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ಆ.11ರಿಂದ ಆರಂಭವಾಗಿದ್ದು, ಇಂದು ವಿಧಾನ ಪರಿಷತ್ ಸದಸ್ಯೆ ಬಿಜೆಪಿಯ ಭಾರತಿ ಶೆಟ್ಟಿ ಕಲಾಪದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದು ಹೊಸ ಚರ್ಚೆ ಹುಟ್ಟು ಹಾಕಿದ್ದೆ.

ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ಕಲ್ಪಿಸಲು ಯಾವ ಭಾಷೆ ಬಳಸಗಲಾಗುತ್ತಿದೆ? ಎಂದ ಭಾರತಿ ಅವರು, ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲಿ ಮಂತ್ರಗಳನ್ನು ಹೇಳಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ತಮಿಳಿನಲ್ಲೇ ಮಂತ್ರ ಪಠಣ ಆಗುತ್ತದೆ. ಹಾಗಾಗಿ ನಮ್ಮ ರಾಜ್ಯದ ದೇವಾಲಯಗಳಲ್ಲಿ ಕನ್ನಡದಲ್ಲಿ ಮಂತ್ರ ಪಠಣ ಮಾಡಿಸಿದರೆ ಒಳ್ಳೆಯದು ಎಂದು ಸಲಹೆ ಇತ್ತರು.

ಅಲ್ಲದೆ ದೇವಾಲಯದ ಪರಿಸರ ಸ್ವಚ್ಚತೆಗೆ ಒಂದು ನಿಯಮ ನಿಬಂಧನೆ ಮಾಡಬೇಕು ಎಂದು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗ ರೆಡ್ಡಿ, ಆಗಮಿಕ ಶಿಕ್ಷಣ ಪಡೆದವರಿಗೆ 18 ವರ್ಷಗಳಿಂದ ಸರ್ಟೀಪಿಕೇಟ್ ಕೊಟ್ಟಿರಲಿಲ್ಲ. 18 ವರ್ಷಗಳಿಂದ ಆಗದೇ ಇದ್ದ ಘಟಿಕೋತ್ಸವನ್ನು ನಾವು ಮಾಡಿದ್ದೇವೆ ಎಂದರು.

ದೇವಸ್ಥಾನದ ಆವರಣಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದೇವೆ. ಕನ್ನಡದಲ್ಲಿ ಮಂತ್ರಪಠಣ ಎಂಬ ವಿಚಾರಕ್ಕೆ ಸೂಕ್ತ ಉತ್ತರ ನೀಡದ ಸಚಿವರು, ನಮಗೂ ಮಾಹಿತಿ ಇದೆ ನೋಡೋಣ ಎಂದಷ್ಟೇ ಹೇಳಿ ಮುಜರಾಯಿ ಸಚಿವರು ಸುಮ್ಮನಾದರು.MUDA case: ಪಾರ್ವತಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಸಮನ್ಸ್ – ಅಪಾಯಿಂಟ್‌ಮೆಂಟ್ ತೆಗೊಂಡು ಬನ್ನಿ ಎಂದ ಸಿಎಂ ಭದ್ರತಾ ಅಧಿಕಾರಿಗಳು

Comments are closed.