Sujatha Bhat: ಸುಜಾತಾ ಭಟ್‌ಗೆ ಮದುವೆನೇ ಆಗಿಲ್ವಾ? ನಿಜವಾದ ಕಥೆಯೇ ಬೇರೆನಾ? ಸ್ವಂತ ಭಾವ ಬಿಚ್ಚಿಟ್ಟರು ಅಸಲಿ ಸತ್ಯ!

Sujatha Bhat: ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣದ ನಡುವೆ ಸುಮಾರು 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅನನ್ಯ ಭಟ್ ಪ್ರಕರಣ ಕೂಡ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದೀಗ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರು ಪೊಲೀಸರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ ಎಂದು ಕೆಲ ಮಾಧ್ಯಮದವರು ವರದಿ ಮಾಡಿದ್ದರು. ಇದರ ಬೆನ್ನಲ್ಲೇ ಸುಜಾತ ಭಟ್ಟವರು ವಿಡಿಯೋ ಮಾಡಿ ನಾನು ಎಲ್ಲೋ ನಾಪತ್ತೆಯಾಗಿಲ್ಲ, ಎಲ್ಲಿರಬೇಕೋ ಅಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಸುಜಾತ ಭಟ್ ಭಾವ ಕೆಲವೊಂದು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಹೌದು, ಸುಜಾತಾ ಅಕ್ಕ ವಾರಿಜಾ ಪತಿ ಮಹಾಭಲೇಶ್ವರ್ ಸುಜಾತಾ ಭಟ್ ಬಗ್ಗೆ ಮಾತನಾಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ 1988ರಲ್ಲಿ ಸುಜಾತಾ ಭಟ್ ಅಕ್ಕನನ್ನ ಮದುವೆಯಾದೆ. ಆ ವೇಳೆ ಆಕೆಗೆ ಮದುವೆಯೇ ಆಗಿರಲಿಲ್ಲ. ಆಕೆ ಮನೆ ಬಿಟ್ಟು ಹೋಗಿದ್ರು. ಅನನ್ಯಾ ಭಟ್ ಎಂಬ ಮಗಳೇ ಇಲ್ಲ. ಸುಜಾತಾ ಭಟ್ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದದ್ದು. ಬಹಳಷ್ಟು ವರ್ಷಗಳಿಂದ ಆಕೆ ಸಂಪರ್ಕದಲ್ಲಿಲ್ಲ. ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಆಕೆ ಬದುಕೇ ಇಲ್ಲ ಅಂತಾ ಕೆಲ ವರ್ಷಗಳಿಂದ ಅಂದುಕೊಂಡಿದ್ವಿ. ಈಗ ಧರ್ಮಸ್ಥಳದ ಪ್ರಕರಣದಲ್ಲಿ ಯಾವುದೋ ಒಂದು ಗುಂಪಿನ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದಾರೆ ಅಂತಾ ಭಾವ ಮಹಾಭಲೇಶ್ವರ ಆರೋಪಿಸಿದ್ದಾರೆ.
ಅಲ್ಲದೆ ಇದೀಗ ಸುಜಾತಾ ಭಟ್ ಅವರು 2003ರಲ್ಲಿ ನನ್ನ ಎಂಬಿಬಿಎಸ್ ಓದುವ ಮಗಳು ಧರ್ಮಸ್ಥಳದಲ್ಲಿ ನಾಪತ್ತೆ ಆಗಿದ್ದಾಳೆ ಎಂಬ ದೂರು ನೀಡಿದ್ದಾರೆ. ಆದರೆ, ಆಕೆಗೆ ಅಸಲಿಗೆ ಮದುವೆಯೇ ಆಗಿರಲಿಲ್ಲ. ಅನೈತಿಕ ಸಂಬಂಧಕ್ಕೆ ಒಮ್ಮೆ ಗರ್ಭಿಣಿ ಆಗಿದ್ದರು. ಆದರೆ, ಅದನ್ನು ಆರೂರು ಕ್ಲಿನಿಕ್‌ನಲ್ಲಿ ತೆಗೆಸಿಕೊಂಡು ಬಂದು ಸೀತಾ ನದಿಯಲ್ಲಿ ಮಗುವನ್ನಿ ಬೀಸಾಡಿದ್ದಳು. ಅದಾದ ನಂತರ ಉಡುಪಿ ಬಸ್ ನಿಲ್ದಾಣದಲ್ಲಿ ಅನೈತಿಕ ವ್ಯವಹಾರ ಮಾಡುವಾಗ ಸಿಕ್ಕಿಬಿದ್ದಿದ್ದಳು. ಆಗ ನಿಟ್ಟೂರು ರಿಮ್ಯಾಂಡ್ ಹೋಮ್‌ಗೆ ಹಾಕಿದ್ದರು. ಅಲ್ಲಿ ಒಂದು ವಾರ ಇದ್ದು, ಕಾಂಪೌಂಡ್‌ಗೆ ಸೇರೆ ಕಟ್ಟಿ ಅಲ್ಲಿಂದ ಪರಾರಿ ಆಗಿ ನಿಟ್ಟೂರು, ಉಡುಪಿ ಬಿಟ್ಟು ಪರಾರಿ ಆಗಿದ್ದಳು. ಎಷ್ಟು ಹುಡುಕಿದರೂ ಸಿಗಲಿಲ್ಲ. ಎಲ್ಲಿಗೆ ಹೋದಳೆಂಬುದು ಮನೆಯವರಿಗೂ ಗೊತ್ತಾಗಲಿಲ್ಲ. ಇದಾದ 3 ವರ್ಷದ ಬಳಿಕ ಬೆಂಗಳೂರಿಗೆ ಬಂದಳು. ಆಗ ಸುಜಾತಾಳ ಅಕ್ಕ ನನ್ನ ಹೆಂಡತಿ ವಾರಿಜಾ, ಆದದ್ದೆಲ್ಲಾ ಆಯ್ತು ತಂಗಿಗೊಂದು ಕೆಲಸ ಕೊಡಿಸಿ ಎಂದು ಹೇಳಿದರು. ಆಗ ನಾನು ನಮ್ಮವರದ್ದೇ ಇದ್ದ ಶೇಖರ್ ಆಸ್ಪತ್ರೆಯಲ್ಲಿ ಒಂದು ಕೆಲಸ ಕೊಡಿಸಲಾಯಿತು. ಆದರೆ, ಅಲ್ಲಿಯೂ ಒಂದು ವಾರ ಕೆಲಸ ಮಾಡಿ ಅಲ್ಲಿಂದ ಓಡಿ ಹೋದಳು.
ಪರ್ಕಳದ ಬಳಿಯ ಪರಿಕಾರ ಎಂಬ ಕುಟುಂಬಇವರದ್ದು. ಅವರ ಅಪ್ಪನಿಗೆ ಮೂರು ಜನ ಮಕ್ಕಳು. ಸುಜಾತಾ ಕೊನೆಯವಳು ಆಗಿದ್ದಾಳೆ. ಇವರನ್ನು ಕಂಡರೆ ಯಾರಿಗೂ ಆಗುವುದಿಲ್ಲ. ಅವರ ಸಹೋದರನೇ ಸುಜಾತಾಳನ್ನು ಯಾರೂ ಮನೆಗೆ ಸೇರಿಸಬೇಡಿ, ಮನೆಯ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಾಳೆ ಎಂದು ಎಲ್ಲ ಸಂಬಂಧಿಕರಿಗೆ ಹೇಳಿದ್ದಳು. ಆದರೆ, ಅವರ ಅಕ್ಕ ವಾರಿಜಾಳೊಂದಿಗೆ ಬೆಂಗಳೂರಿಗೆ ವಾಸವಿದ್ದ, ಕೋರ್ಟ್ ಬಳಿ ಒಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆವು. ನಮ್ಮ ಅಂಗಡಿಗೆ ಒಮ್ಮೆ ಬಂದಳು. ಆಗ ಭಾವ ನಾನು ರಿಪ್ಪನ್‌ಪೇಟೆ ಅವರನ್ನು ಮದುವೆ ಆಗಿದ್ದೇನೆ. ನಿಮಗೆ ಏನಾದರೂ ಬೇಕಾದರೆ ಕೇಳಿ ಕೊಡ್ತೇನೆ ಎಂದು ಹೇಳಿದ್ದಳು.
ಇದಾದ 3 ವರ್ಷಗಳ ನಂತರ ಪುನಃ ನಮ್ಮನೆಗೆ ಬಂದು ಭಾವ ನಾನು ಜಡ್ಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಏನಾದರೂ ಸಹಾಯ ಬೇಕಾ ಕೇಳಿ. ಈ ಚೆಕ್ ತಗೊಳಿ, ನೀವು ಹಣ ತೆಗೆದುಕೊಳ್ಳಿ ಎಂದು ಹೇಳಿದಳು. ಆದರೆ, ನಾನು ಜಡ್ಜ್ ಮನೆಯ ಚೆಕ್ ತೆಗೆದುಕೊಂಡರೆ ನನ್ನ ಜೈಲಿಗೆ ಹಾಕಬಹುದು ಎಂಬ ಅನುಮಾನದಿಂದ ನಿನ್ನ ಸಹಾಯ ಬೇಡವೆಂದು, ಇನ್ನೊಮ್ಮೆ ಇಲ್ಲಿಗೆ ಬರಬೇಡ ಎಂದು ಹೇಳಿ ಕಳಿಸಿದೆ. ಅದೇ ಕೊನೆ, 2002-03ರ ನಂತರ ಈವರೆಗೆ ನನಗೆ ಸಿಕ್ಕಲೇ ಇಲ್ಲ ಎಂದು ಸುಜಾತಾ ಅವರ ಬಾವ ಮಹಾಬಲೇಶ್ವರ ಅವರು ತಿಳಿಸಿದರು.
Dharmasthala case: ಧರ್ಮಸ್ಥಳ ಪ್ರಕರಣ – ಎಸ್ಐಟಿಗೆ ಮುಸ್ಲಿಂ ಮುಖಂಡನ ಸವಾಲ್! ಒಂದು ವರ್ಷ ಅಗೆದ್ರು ಎನೂ ಸಿಗಲ್ಲ
Comments are closed.