AP: ನೀರು ಕುಡಿದವರಿಗೆ ಅವಳಿ ಮಕ್ಕಳನ್ನು ಕರುಣಿಸುತ್ತೆ ಈ ಊರ ಬಾವಿ – ಮಕ್ಕಳಾಗದವರಿಗೂ ಮಕ್ಕಳಾಗುವುದು ಫಿಕ್ಸ್ !!

Share the Article

AP: ಭಾರತದ ಹಲವು ಗ್ರಾಮಗಳಲ್ಲಿ ನಾವು ವಿವಿಧ ರೀತಿಯ ವಿಶೇಷತೆಗಳನ್ನು ಕಾಣುತ್ತೇವೆ. ಕೆಲವೊಂದು ಅಚ್ಚರಿ ಹುಟ್ಟಿಸಿದರೆ ಇನ್ನು ಕೆಲವೊಂದು ಕುತೂಹಲವನ್ನು ಮೂಡಿಸುತ್ತದೆ. ಅಂತಯೇ ಆಂಧ್ರಪ್ರದೇಶದ ಒಂದು ಊರಲ್ಲಿ, ಊರಿನ ತುಂಬಾ ಮುಕ್ಕಾಲು ಪರ್ಸೆಂಟ್ ಅವಳಿ- ಜವಳಿ ಮಕ್ಕಳು ಇರುವುದನ್ನೇ ಕಾಣಬಹುದು. ಇದಕ್ಕೆ ಕಾರಣ ಒಂದು ಬಾವಿ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು..

ಹೌದು, ಕೇಳುವುದಕ್ಕೆ ನಿಮಗಿದು ಅಚ್ಚರಿ ಅನಿಸಬಹುದು. ಆದರೆ ಆ ಊರಿನ ಜನ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನ ಇದನ್ನು ಬಹಳ ಬಲವಾಗಿ ನಂಬುತ್ತಿದ್ದಾರೆ. ಇವರ ನಂಬಿಕೆಗೆ ಸಾಕ್ಷಿ ಎಂಬಂತೆ ಆ ಊರಿನ ತುಂಬೆಲ್ಲಾ ಅವಳಿ ಮಕ್ಕಳನೇ ನೀವು ಕಾಣಬಹುದಾಗಿದೆ. ಅಂದಹಾಗೆ ಈ ಬಾವಿ ಇರುವುದು ಆಂಧ್ರಪ್ರದೇಶದಲ್ಲಿ. ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ದೊಡ್ಡಿಗುಂಟಾ ಗ್ರಾಮದಲ್ಲಿ. ಈ ಊರಿನ ಬಾವಿಯೊಂದು ಅವಳಿ ಮಕ್ಕಳ ಬಾವಿ ಎಂದೇ ಫೇಮಸ್ ಆಗಿದೆ.

ಈ ವೀಡಿಯೋವನ್ನು ಟ್ರಾವೆಲ್ ಬ್ಲಾಗರ್‌, ಕನ್ನಡ ಯೂಟ್ಯೂಬರ್ ಅರುಣ್ ಎಂಬುವವರು ತಮ್ಮ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ದೊಡ್ಡಿಗುಂಟಾ ಗ್ರಾಮದಲ್ಲಿ 120 ಜನ ಅವಳಿ ಮಕ್ಕಳಿದ್ದಾರೆ ಎನ್ನುತ್ತಾರೆ ಆ ಗ್ರಾಮದ ಜನ. ಮೂರು ತಿಂಗಳ ಕಾಲ ನಿರಂತರ ಈ ನೀರನ್ನು ಕುಡಿದರೆ ಶೇಕಡಾ 100 ರಷ್ಟು ಅವಳಿ ಮಕ್ಕಳು ಜನಿಸುತ್ತಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಇದೀಗ ಅಕ್ಕಪಕ್ಕದ ಊರಿನ ಜನರೂ ಕೂಡ ಈ ಬಾವಿಯ ನೀರನ್ನು ತೆಗೆದುಕೊಂಡು ಹೋಗಿ ಕುಡಿಯುತ್ತಾರೆ. ಅನೇಕರು ತಮ್ಮ ಮನೆಯ ಮಕ್ಕಳು ಸೊಸೆಯಂದಿರಿಗಾಗಿ ಈ ನೀರನ್ನು ಇಲ್ಲಿಂದ ವಾಹನಗಳಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಅವಳಿ ಮಕ್ಕಳು ಜನಿಸಬೇಕಾದರೆ ಕನಿಷ್ಠ ಮೂರು ತಿಂಗಳು ಈ ನೀರು ಕುಡಿಯಬೇಕು ಎನ್ನುತ್ತಾರೆ ಇಲ್ಲಿನ ಜನ.

ಅಮೆರಿಕಾದಲ್ಲಿ ವೈದ್ಯರಾಗಿದ್ದವರೊಬ್ಬರು ತಮ್ಮ ಪುತ್ರಿಗೆ ಮಕ್ಕಳಾಗಿಲ್ಲವೆಂದು ಈ ನೀರನ್ನು ಪಾರ್ಸೆಲ್ ಮಾಡಿಸಿಕೊಂಡಿದ್ದರು. ಅವರ ಪುತ್ರಿಗೆ ನಂತರದಲ್ಲಿ ಗಂಡು ಮಗುವಾಯ್ತು ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಅಂದಹಾಗೆ ಈ ಬಾವಿ ಪಕ್ಕದಲ್ಲೇ ಸಂತಾನಲಕ್ಷ್ಮಿ ದೇಗುಲವೂ ಇದೆ. ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಚ್ಚರಿ ಮೂಡಿಸಿದೆ.

Comments are closed.