Tirumala: ತಿರುಪತಿಯಲ್ಲಿ ಹುಂಡಿ ಹಣ ಎಣಿಕೆ: ಜುಲೈ ತಿಂಗಳಲ್ಲೇ 129.45 ಕೋಟಿ ಸಂಗ್ರಹ

Tirumala: ತಿರುಮಲದಲ್ಲಿರುವ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಜುಲೈ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಜುಲೈನಲ್ಲಿ ತಿರುಮಲ ದೇವಸ್ಥಾನದ ಹುಂಡಿ ಸಂಗ್ರಹ ₹129.45 ಕೋಟಿ ತಲುಪಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಿಂದಿನ ವರ್ಷದ ಜುಲೈನಲ್ಲಿ ಸಂಗ್ರಹವಾದ ₹125.35 ಕೋಟಿಗೆ ಹೋಲಿಸಿದರೆ ಇದು ಗಮನಾರ್ಹ ಹೆಚ್ಚಳವಾಗಿದೆ. ಟಿಟಿಡಿ ಅಧಿಕಾರಿಗಳ ಪ್ರಕಾರ, ಹುಂಡಿ ಸಂಗ್ರಹದಲ್ಲಿ ಹೆಚ್ಚಳಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚಳ ಮತ್ತು ವಸತಿ ಮತ್ತು ಪ್ರಸಾದ ಮಾರಾಟದಿಂದ ಹೆಚ್ಚಿನ ಆದಾಯ ಕಾರಣ ಎಂದು ಹೇಳಿದ್ದಾರೆ.
ಟಿಟಿಡಿ ಅಧಿಕಾರಿಗಳ ಮಾಹಿತಿಯ ಅನುಸಾರ ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ.74 ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.
Comments are closed.