Mangaluru: ಮಂಗಳೂರು: ಡ್ರಗ್ಸ್ ಪಾರ್ಸೆಲ್ ಹೆಸರಿನಲ್ಲಿ ಬೆದರಿಕೆ: 3 ಕೋಟಿ ಹಣ ಗುಳುಂ

Mangaluru: ಡ್ರಗ್ಸ್ ಪಾರ್ಸೆಲ್ ಹೆಸರಿನಲ್ಲಿ ಸೇವಾ ನಿವೃತ್ತಿ ಹೊಂದಿದ್ದ ವೃದ್ಧೆಯೊಬ್ಬರಿಗೆ ಮೂರು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ.

ಸೈಬರ್ ವಂಚಕಿ ಕರೆ ಮಾಡಿ ಡ್ರಗ್ಸ್ ಪಾರ್ಸೆಲ್ ಹೆಸರಿನಲ್ಲಿ ಬೆದರಿಸಿದ್ದು, 3.09 ಕೋಟಿ ರೂ. ವಂಚನೆ ಮಾಡಿದ ಕುರಿತು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ದೂರು ದಾಖಲು ಮಾಡಲಾಗಿದೆ. 72 ವರ್ಷದ ಮಹಿಳೆ ಸಿಇಎನ್ ಠಾಣೆಗೆ ದೂರನ್ನು ನೀಡಿದ್ದಾರೆ.
ಜನವರಿ 15ರಂದು ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿದ್ದು, ಆ ನಂಬರ್ಗೆ ವಾಪಸ್ ಕರೆ ಮಾಡಿದಾಗ ನೀವು ಚೀನಾಗೆ ಕಳುಹಿಸಿದ್ದ ಪಾರ್ಸೆಲ್ ವಾಪಾಸ್ ಬಂದಿದೆ. ಅದರಲ್ಲಿ 150ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ. ಈ ಪ್ರಕರಣದಲ್ಲಿ ನಿಮಗೆ 75ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಆಗುವುದಾಗಿ ಬೆದರಿಸಿದ್ದಾಳೆ. ಇದನ್ನು ನಂಬಿದ ವೃದ್ಧೆ ಜುಲೈ 4 ರವರೆಗೆ 3.09 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.
ನಂತರ ಅಪರಿಚಿತ ಮಹಿಳೆಯಿಂದ ಪ್ರತಿಕ್ರಿಯೆ ದೊರೆಯದೇ ಇದ್ದಾಗ ಮೋಸ ಹೋಗಿರುವುದಾಗಿ ಗೊತ್ತಾಗಿ ದೂರನ್ನು ನೀಡಿದ್ದಾರೆ.
Comments are closed.