Yellow Line Metro: ಮೋದಿಯಿಂದ ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ- ಟಿಕೆಟ್ ದರ ಹೇಗಿದೆ? ಎಲ್ಲೆಲ್ಲಿ ನಿಲುಗಡೆ?

Yellow Line Metro: ಸಿಲಿಕಾನ್ ಸಿಟಿಯ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಆರ್.ವಿ. ರಸ್ತೆ-ಬೊಮ್ಮಸಂದ್ರ ನಡುವಿನ (19.15 ಕಿ.ಮೀ) ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಮೂರು ರೈಲುಗಳ ಮೂಲಕ ಈ ಮಾರ್ಗದಲ್ಲಿ ಮೆಟ್ರೋ ರೈಲು ಸೋಮವಾರದಿಂದ ಸಂಚಾರ ಆರಂಭಿಸಲಿದೆ. ಹಾಗಿದ್ದರೆ ಇದರ ಪ್ರಯಾಣದರ ಎಷ್ಟಿದೆ ಗೊತ್ತಾ?

ಹಳದಿ ಮಾರ್ಗದ ನಿಲ್ದಾಣಗಳು ಯಾವುವು?
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣ.
ಯಲ್ಲೋ ಮಾರ್ಗ ಮೆಟ್ರೋದ ಪ್ರಯಾಣ ದರ
ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
ಆರ್ ವಿ ರಸ್ತೆ-ಜಯದೇವ 10 ರೂಪಾಯಿ.
ಆರ್ ವಿ ರಸ್ತೆ- BTM ಲೇಔಟ್ 20 ರೂ.
ಆರ್ ವಿ ರಸ್ತೆ -ಬೊಮ್ಮನಹಳ್ಳಿ 30 ರೂ.
ಆರ್ ವಿ ರಸ್ತೆ -ಕೂಡ್ಲೂಗೇಟ್ 40 ರೂ.
ಆರ್ ವಿ ರಸ್ತೆ -ಸಿಂಗಸಂದ್ರ 50 ರೂ.
ಆರ್ ವಿ ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ.
ಆರ್ ವಿ ರಸ್ತೆ -ಬೊಮ್ಮಸಂದ್ರ 60 ರೂ.
ಸಿಲ್ಕ್ ಬೋರ್ಡ್- ಬೊಮ್ಮಸಂದ್ರ 60 ರೂ.
ಇನ್ನು ಹಳದಿ ಮಾರ್ಗ ಸದ್ಯ ಕೇವಲ ಮೂರು ರೈಲುಗಳಿಂದ ಕಾರ್ಯಾಚರಣೆ ಆಗಲಿದೆ. ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. 2026ರ ವೇಳೆಗೆ ಈ ಮಾರ್ಗಕ್ಕೆ 14 ರೈಲು ಸೇರ್ಪಡೆ ಆಗಲಿದ್ದು, ಆಗ 90 ಸೆಕೆಂಡ್‌ಗೆ ಒಮ್ಮೆ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
Comments are closed.