Vachanananda Shri: ಧರ್ಮಸ್ಥಳ ಪ್ರಕರಣ – ಹೆಗ್ಗಡೆಯವರ ಪರ ವಹಿಸಿದ ವಚನಾನಂದ ಶ್ರೀ!!

Vachanananda Shri: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಕುರಿತಾಗಿ ಚುರುಕಾದ ತನಿಖೆ ನಡೆಯುತ್ತಿದೆ. ಜೊತೆಗೆ ಕೆಲವರು ಧರ್ಮಸ್ಥಳ ಕ್ಷೇತ್ರದ ಕುರಿತು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವು ಕೂಡ ಜೋರಾಗಿದೆ. ಇದರ ನಡುವೆಯೇ ಹರಿಹರದ ವಚನಾನಂದ ಶ್ರೀಗಳು ವೀರೇಂದ್ರ ಹೆಗ್ಗಡೆ ಯವರ ಪರ ಬ್ಯಾಟ್ ಬೀಸಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರವಾಗಿ ಮಾತನಾಡಿದ ಅವರು, ಕೆಲವರು ಹಿಂದುತ್ವಕ್ಕೆ ಕಂಟಕ ತರಬೇಕು, ಧಾರ್ಮಿಕ ಸಂಸ್ಥೆಗಳ ಮೇಲೆ, ಹಿಂದುತ್ವದ ಸಂಘ ಸಂಸ್ಥೆಗಳಿಗೆ, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ಮಾಡುತ್ತಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಅಲ್ಲದೆ ಕೆಲವರಿಗೆ ಹಿಂದುತ್ವ ಬೆಳೆಯುತ್ತಿದೆ, ಇಡೀ ಜಗತ್ತೇ ಹಿಂದುತ್ವ ಆಗಬಹುದು ಎಂಬ ಭಯ ಕಾಡುತ್ತಿದೆ. ಭಾರತದ ಯಾವೊಬ್ಬ ಹಿಂದೂ ಗುರುಗಳು ನಾವು ಮತಾಂತರ, ಧರ್ಮಾಂತರ ಮಾಡಲ್ಲ. ಧರ್ಮದ ತತ್ವ ಸಿದ್ದಾಂತಗಳನ್ನು ಬಿತ್ತುತ್ತಿದ್ದೇವೆ. ಧರ್ಮಸ್ಥಳ, ಶಬರಿಮಲೆ, ಇನ್ನೂ ಅನೇಕ ಕಡೆ ಆಧ್ಯಾತ್ಮ ಗುರುಗಳ ಒಳ್ಳೆ ಕಾರ್ಯಗಳನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅಪಖ್ಯಾತಿ ತರುವುದು, ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲಾ ಹಿಂದೂಗಳು ಅವರ ಜೊತೆ ಇರಬೇಕು ಎಂದರು.
ಅಲ್ಲದೆ ಜೈನರು ಯಾವತ್ತೂ ನಾವು ಹಿಂದೂಗಳಲ್ಲ ಎಂದು ಹೇಳಿಲ್ಲ. ಅವರು ಯಾವತ್ತಾದರೂ ಹಿಂದೂ ಪರಂಪರೆ ಟೀಕೆ ಮಾಡಿದ್ದಾರಾ? ಜೈನರು ಹಾಲಿನಲ್ಲಿ ಕಲ್ಲಸಕ್ಕರೆ ಜತೆ ನಮ್ಮ ಜೊತೆ ಇದ್ದಾರೆ. ಅವರು ಪ್ರಾಕೃತಭಾಷೆಯಲ್ಲಿ ಮಂತ್ರ ಹೇಳುತ್ತಾರೆ. ಅವರು ಎಂದೂ ಹಿಂದುಗಳನ್ನು ಟೀಕೆ ಮಾಡಿಲ್ಲ. ಅವರು ನಮ್ಮ ಭಾಗವಾಗಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣಾಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಯಾಕೆ ಅವರ ಒಳ್ಳೆ ಕೆಲಸಗಳು ಕಾಣುತ್ತಿಲ್ಲ ನಿಮಗೆ? ಅವರ ಒಳ್ಳೆ ಕೆಲಸ ನಾವು ಪ್ರೋತ್ಸಾಹ ಮಾಡಬೇಕು. ತಿನ್ನುವುದು ಪಡಿಯಕ್ಕಿ, ಮಲಗುವುದು ಅರ್ಧ ಮಂಚದಲ್ಲಿ, ಏನಿದೆ ಜೀವನದಲ್ಲಿ ಎಂದರು.
ECI: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್ – 334 ಪಕ್ಷಗಳು ಪಟ್ಟಿಯಿಂದ ಔಟ್ !!
Comments are closed.