Pratap Simha: ಧರ್ಮಸ್ಥಳವನ್ನು ಕಬಳಿಸಲು ಸರಕಾರ ಸಾಕ್ಷಿ ಹುಡುತ್ತಿದೆ: ಪ್ರತಾಪ್ ಸಿಂಹ ಸ್ಫೋಟಕ ಆರೋಪ

Pratap Simha: ಪ್ರತಾಪ್ ಸಿಂಹ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಆರೋಪಿ ಎಂದು ತೀರ್ಮಾನ ಮಾಡಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.

ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಹಾಳು ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಅಸ್ಥಿ ಹುಡುಕಾಟಕ್ಕೂ ಸಂಬಂಧವಿಲ್ಲ. ಧರ್ಮಸ್ಥಳವನ್ನು ಕಬಳಿಸಲು ಈ ಸರಕಾರ ಪ್ರಯತ್ನ ಆರಂಭ ಮಾಡಿದೆ ಎಂದು ಆರೋಪ ಮಾಡಿದರು.
ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಯಾಗಿದೆ ಎನ್ನುತ್ತಾರೆ. ಇದು ವಾಸ್ತವದಲ್ಲಿ ಸಾಧ್ಯವೇ? ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಏನು ದಾವುದ್ ಇಬ್ರಾಹಿಂ ನಾ? ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಆರೋಪಿಸಿದರು.
ಇದನ್ನು ಓದಿ: BJP: ‘ಕನ್ನಡಿಗರ ಕ್ಷಮೆ ಕೇಳೋದಿಲ್ವಾ ರಾಹುಲ್ ಗಾಂಧಿ?’ ಎಂದು 13 ಪ್ರಶ್ನೆಗಳನ್ನು ಮುಂದಿಟ್ಟ ಬಿಜೆಪಿ!!
Comments are closed.