Dharmasthala Case: – ಮಾಧ್ಯಮದವರು ಸುಳ್ಳು ಸುದ್ದಿ ಮಾಡುವ ವಿಚಾರ – ಮಿಸ್ ಇನ್ಫಾರ್ಮೇಷನ್ ಬಿಲ್ ಜಾರಿ ಸಾಧ್ಯತೆ – ಪ್ರಿಯಾಂಕ ಖರ್ಗೆ

Share the Article

Dharmasthala Case: ಧರ್ಮಸ್ಥಳ ತಲೆಬುರಡೆ ಘರ್ಷಣೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸುಳ್ಳು ಸುದ್ದಿ ಅಂತ ತೀರ್ಮಾನ ಸರಿಯಲ್ಲ, ಜನರೇ ತೀರ್ಮಾನ ಮಾಡೋದಲ್ಲ. ಇನ್ನು ತನಿಖೆ ನಡೆಯುತ್ತಿದೆ. ಸೂಕ್ಷ್ಮತೆಯನ್ನ ಕಾಪಾಡಬೇಕು. ಕೆಲವರು ಕೋರ್ಟ್ ಗೆ ಹೋಗಿದ್ದಾರೆ. ಸುಳ್ಳು ಸುದ್ದಿ ಯಾವುದೇ ಇರಲಿ ಹರಡಬಾರದು. ಇದಕ್ಕೆ ಮಿಸ್ ಇನ್ಫಾರ್ಮೇಷನ್ ಬಿಲ್ ತರ್ತಿದ್ದೇವೆ ಎಂದು ಹೇಳಿದರು.

ಇನ್ನು ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಖರ್ಗೆ, ಇವತ್ತು ಮಧ್ಯಾಹ್ನ ಪ್ರೆಸ್ ಮೀಟ್ ಕರೆದಿದ್ದಾರೆ. ಮತಗಳವು ಬಗ್ಗೆ ದಾಖಲೆ ಬಿಡುಗಡೆ ಮಾಡ್ತಾರೆ. ಆದಾದ ಮೇಲೆ ತೀರ್ಮಾನ ತೆಗೆದುಕೊಳ್ಳಲಿ. ಎಲೆಕ್ಷನ್ ಕಮೀಷನ್ ಫ್ರೀ ಫೇರ್ ಇದ್ಯಾ ಗೊತ್ತಿಲ್ಲ. ಜನರೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಉತ್ತರಿಸಿದರು

ರಾಹುಲ್, ಸಿಎಂ, ಡಿಸಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆ ಇನ್ನು ಆರಂಭ ಆಗಿಲ್ಲ, ನಾವು ಇನ್ನು ಆರೋಪವನ್ನೇ ಮಾಡಿಲ್ಲ. ಅದಾಗಲೇ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಬಿಜೆಪಿಯವರು ಹೇಳ್ತಿದ್ದಾರೆ. ಮತಗಳವು ಆಗಿದೆ ದಾಖಲೆ ಬಿಡ್ತೇವೆ ಅಂದಿದ್ದೇವೆ. ದಾಖಲೆ ಬಿಡುವವರೆಗೆ ಸುಮ್ಮನಿರಿ. ನಾವು ಹಿಂಟ್ ಆಂಡ್ ರನ್ ಗಿರಾಕಿಗಳಲ್ಲ. ಸಾವಿರಾರು ಪುರಾವೆಗಳನ್ನ ಮುಂದಿಡ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇದನ್ನೂ ಓದಿ: Udupi: ಮಲ್ಪೆ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ!

Comments are closed.