ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್‌ ಬಾಲರಾಜ್‌ ನಿಧನ

Share the Article

Sandalwood:ಸ್ಯಾಂಡಲ್‌ವುಡ್‌ನ ಯುವ ನಟ ಹಿರಿಯ ನಿರ್ಮಾಪಕ ಆನೇಕಲ್‌ ಬಾಲರ್‌ ಅವರ ಪುತ್ರ ಸಂತೋಷ್‌ ಬಾಲರಾಜ್‌ (34) ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ 9.30 ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನ ಹೊಂದಿದ್ದಾರೆ.

ಇವರು ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದು, ಗುಣಮುಖರಾಗಿದ್ದರು. ಅನಂತರ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು.

ಸಂತೋಷ್‌ ಬಾಲರಾಜ್‌, ಕರಿಯಾ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ನಾಯಕರಾಗಿ ನಟನೆ ಮಾಡಿದ್ದಾರೆ.

ಇದನ್ನು ಓದಿ: Dharmasthala: ಧರ್ಮಸ್ಥಳ ಪ್ರಕರಣ – ಶೋಧ ಕಾರ್ಯದ ವೇಳೆ ತಲೆಬುರುಡೆ, 100 ಮೂಳೆ ಪತ್ತೆ !!

Comments are closed.