Prajwal Revanna: ಅಪರಾಧಿ ಪ್ರಜ್ವಲ್ ರೇವಣ್ಣಗೆ ಇಂದು ಹುಟ್ಟುಹಬ್ಬದ ದಿನ

Prajwal Revanna: ಅಪರಾಧಿ ಪ್ರಜ್ವಲ್ ರೇವಣ್ಣ ಅವರಿಗೆ ಇಂದು (ಆಗಸ್ಟ್ 05) ಹುಟ್ಟು ಹುಬ್ಬದ ದಿನವಾಗಿದ್ದು, ಜೈಲಿನಲ್ಲಿ ಇದು ಮೊದಲ ಬರ್ತ್‌ಡೇ ಆಗಿದೆ. ಈ ಹಿಂದೆ ಭಾರೀ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುತ್ತಿದ್ದ ಪ್ರಜ್ವಲ್ ರೇವಣ್ಣ ಇದೀಗ ಜೈಲು ಹಕ್ಕಿಯಾಗಿದ್ದು, ಯಾವುದೇ ಸಂಭ್ರಮ, ಸಂತಸವಿಲ್ಲದೇ ಪ್ರಜ್ವಲ್ ರೇವಣ್ಣ ನಿವಾಸ ಬಿಕೋ ಎನ್ನುತ್ತಿದೆ

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ತನ್ನ 35 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಜ್ವಲ್‌ಗೆ ದೋಷಿ ಎಂದು ಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಈ ದಿನ ತನ್ನ ಜನ್ಮದಿನವನ್ನು ಪ್ರಜ್ವಲ್ ಜೈಲಿನಲ್ಲಿಯೇ ಆಚರಿಸಿಕೊಳ್ಳಬೇಕಿದೆ.
Comments are closed.