Prajwal Revanna: ಪ್ರಜ್ವಲ್ ಇದೀಗ ಕೈದಿ ನಂ.15528, ದಿನಗೂಲಿ ರೂ.524, ಕೆಲಸದ ವಿವರ ಇಲ್ಲಿದೆ!

Prajwal Revanna: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಕೈದಿ ಸಮವಸ್ತ್ರವನ್ನು ನೀಡಲಾಗಿದ್ದು, ಇದೀಗ ಈತ ಕೈದಿ ನಂ.15528 ಆಗಿದ್ದಾನೆ. ಸಜಾಬಂಧಿ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ಇನ್ನು ಮುಂದೆ ಜೈಲಿನಲ್ಲಿ ಪ್ರತಿ ದಿನ 8 ಗಂಟೆ ಕೆಲಸ ಮಾಡಬೇಕು. ಪ್ರಾರಂಭದಲ್ಲಿ ದಿನಕ್ಕೆ ರೂ.524 ದಿನಗೂಲಿ ನೀಡಲಾಗುವುದು. ಒಂದು ವರ್ಷದ ನಂತರ ರೂ.548 ಆಗುತ್ತದೆ. ಎರಡು ವರ್ಷದ ನಂತರ ಕೆಲಸದಲ್ಲಿ ಬಡ್ತಿ ನೀಡಿ ರೂ.615 ಆಗುತ್ತದೆ. ಮೂರು ವರ್ಷದ ನಂತರ ರೂ.663ಕ್ಕೆ ಏರಿಕೆ ಆಗುತ್ತದೆ.
ಬೇಕರಿ, ಗಾರ್ಡನ್ ಕೆಲಸ, ಹೈನುಗಾರಿಕೆ, ಮರಗೆಲಸ, ತೋಟದಲ್ಲಿ ಕೆಲಸ, ಸ್ವಚ್ಛತೆ ಕೆಲಸ ಆಯ್ಕೆಗೆ ಅವಕಾಶ ನೀಡಲಾಗಿದೆ.
ಮಾಹಿತಿ ಪ್ರಕಾರ, ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಯಾರೊಂದಿಗೂ ಮಾತನಾಡದೇ ಮೌನವಾಗಿದ್ದಾರೆ ಎನ್ನಲಾಗಿದೆ.
Comments are closed.