Dharmasthla Case: ಧರ್ಮಸ್ಥಳ ಬುರುಡೆ ಪ್ರಕರಣ: ಇಡೀ ದೇಹದ ಅಸ್ಥಿಪಂಜರ ಪತ್ತೆ?

Share the Article

Mangalore: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿರುವ ಮಾಸ್ಕ್‌ಮ್ಯಾನ್‌ ನೀಡಿದ ದೂರಿನ ಭಾಗವಾಗಿ ಇಂದು ಎಸ್‌ಐಟಿ ತಂಡ ದೂರುದಾರ ಗುರುತು ಮಾಡಿದ 13 ಸ್ಥಳಗಳ ಪೈಕಿ 11 ನೇ ಪಾಯಿಂಟ್‌ನಲ್ಲಿ ಉತ್ಖನನ ಮಾಡಬೇಕಿತ್ತು. ಆದರೆ ಅನಾಮಿಕ ವ್ಯಕ್ತಿ ಬಂಗ್ಲ ಗುಡ್ಡದಲ್ಲಿ ಅಗೆಯುವಂತೆ ತೋರಿಸಿದ್ದು, ಅಲ್ಲಿ ಇಡೀ ಮನುಷ್ಯ ಅಸ್ಥಿಪಂಜರ ದೊರಕಿರುವ ಕುರಿತು ವರದಿಯಾಗಿದೆ.

ಸದ್ಯ ಬಂಗ್ಲ ಗುಡ್ಡದಲ್ಲಿ ಉತ್ಖನನ ಕಾರ್ಯಾಚರಣೆ ಮುಗಿದಿದೆ. ಭೂಮಿಯ ಮೆಲ್ಮೈನಲ್ಲೇ ಅಸ್ಥಿಪಂಜರ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಅಸ್ಥಿಪಂಜರದ ಜೊತೆ ಗಂಡಸಿನ ಉಡುಪು, ಹಗ್ಗ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ಗಂಡಸೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಅಸ್ಥಿಪಂಜರ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿರುವ ಕುರಿತು ವರದಿಯಾಗಿದೆ.

ಬಂಗ್ಲಗುಡ್ಡದಲ್ಲಿ ಉತ್ಖನನದ ಸಂದರ್ಭ ಇಡೀ ದೇಹದ ಅಸ್ಥಿಪಂಜರ ಪತ್ತೆಯಾದ ಅವಶೇಷಗಳನ್ನು ಕಾರ್ಮಿಕರು ಹೊರತಂದಿದ್ದು, ಬರೋಬ್ಬರಿ 4 ಬಾಕ್ಸ್‌ಗಳ ಮೂಲಕ ಮೂಳೆಯ ಅವಶೇಷಗಳನ್ನು ಕಾರ್ಮಿಕರು ಹೊರಗೆ ತಂದಿದ್ದಾರೆ.

 

Comments are closed.