Prajwal Revanna: ಕರ್ಮದ ಫಲ ಈ ಜನ್ಮದಲ್ಲೇ ಅನುಭವಿಸಬೇಕು-ಪ್ರಜ್ವಲ್ ಜೀವಾವಧಿ ಶಿಕ್ಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ

Prajwal Revanna: ಇಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಈ ತೀರ್ಪಿನ ಕುರಿತು ಕಾಂಗ್ರೆಸ್ನಿಂದ ಪ್ರತಿಕ್ರಿಯೆ ಬಂದಿದೆ.

ʼಮಾಡಿದ್ದುಣ್ಣೋ ಮಾರಾಯ! ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು! ಕರ್ಮದ ಫಲವನ್ನು ಇದೇ ಜನ್ಮದಲ್ಲೇ ಅನುಭವಿಸಬೇಕು! ಎಂದು ಕರ್ನಾಟಕ ಕಾಂಗ್ರೆಸ್ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

376(2)(n) ಸೆಕ್ಷನ್ ಗೆ ಜೀವಾವಧಿ. 354 ಗೆ 3 ವರ್ಷ, 354(b) 3 ವರ್ಷ ಕಠಿಣ ಕಾರಗೃಹ ಶಿಕ್ಷೆ, ಒಟ್ಟು 11.5 ಲಕ್ಷ ದಂಡ ಜೊತೆಗೆ ಒಟ್ಟು ವಿಧಿಸಲಾದ ದಂಡದ ಮೊತ್ತದಲ್ಲಿ ₹11,25,000 ಅನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಅಪರಾಧಿ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಆದೇಶ ನೀಡಿದೆ.
Comments are closed.