Dharmasthala Case: ಗ್ರಾಮ ಪಂಚಾಯಿತಿ ಬಳಿ 1985 ರಿಂದ 2000 ವರೆಗೂ ಅನಾಥ ಶವಗಳ ಹೂತಿರೋ ವರದಿ ಕೇಳಿದ ಎಸ್‌ಐಟಿ

Dharmasthala Case: ಧರ್ಮಸ್ಥಳ ತಲೆ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 31 ರಂದು ಮಾಸ್ಕ್‌ಮ್ಯಾನ್ ತೋರಿಸಿದ 6ನೇ ಪಾಯಿಂಟ್‌ನಲ್ಲಿ ಕೆಲ ಮೂಳೆಗಳು ದೊರಕಿದೆ. ಎಸ್‌ಐಟಿ ತಂಡ ಇದೀಗ ಧರ್ಮಸ್ಥಳ ಗ್ರಾಮ ಪಂಚಾಯ್ತಿ ಬಳಿ ವರದಿಯೊಂದನ್ನು ಕೇಳಿದೆ.

1985 ರಿಂದ 2000 ವರೆಗೂ ಅನಾಥ ಶವಗಳನ್ನು ಹೂತಿರೋ ಬಗ್ಗೆ ವರದಿ ನೀಡುವಂತೆ ಧರ್ಮಸ್ಥಳ ಗ್ರಾಮ ಪಂಚಾಯ್ತಿಗೆ ಎಸ್‌ಐಟಿ ತಂಡ ಸೂಚನೆ ನೀಡಿದೆ. ಅನಾಥ ಶವಗಳನ್ನು ಎಲ್ಲೆಲ್ಲಿ ಹೂತಲಾಗಿದೆ. ಯಾವ ಸಂದರ್ಭದಲ್ಲಿ ಎಷ್ಟು ಶವ ಹೂತಲಾಗಿದೆ ಎಂದು ವರದಿ ಕೇಳಿದೆ ಎಂದು ವರದಿಯಾಗಿದೆ.
ಧರ್ಮಸ್ಥಳದಲ್ಲಿ ರುದ್ರಭೂಮಿ ಮಂಜೂರಾಗಿದ್ದು ಯಾವಾಗ? ಕಂದಾಯ ಇಲಾಖೆಯಿಂದ ಯಾವ ಸ್ಥಳಗಳಲ್ಲಿ ಅದಕ್ಕೂ ಮೊದಲು ಹೆಣಗಳನ್ನು ಹೂತಿಡಲಾಗ್ತಿತ್ತು ಎಂಬ ಸಂಪೂರ್ಣ ವರದಿ ನೀಡುವಂತೆ ಗ್ರಾಮಪಂಚಾಯ್ತಿ ಪಿಡಿಓಗೆ ಎಸ್‌ಐಟಿ ಕೇಳಿರುವ ಕುರಿತು ವರದಿಯಾಗಿದೆ. ಇಂದೇ ಬಹುಶಃ ಪಂಚಾಯಿತಿಯಿಂದ ವರದಿ ಬರುವ ಸಾದ್ಯತೆ ಇದೆ ಎನ್ನಲಾಗಿದೆ.
Comments are closed.