Dharmasthala Helpline: ಧರ್ಮಸ್ಥಳ ಪ್ರಕರಣ – ಸಹಾಯವಾಣಿಗೆ ನೂರಾರು ಫೋನ್ ಕರೆ – ಇಷ್ಟೊಂದು ಕರೆ ಬಂದ ಕಾರಣ ಏನು?

Share the Article

Dharmasthala Helpline: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ(Dharmasthala) ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಜನರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆದಿದ್ದು, ಇದಕ್ಕೆ ನೂರಾರು ಕರೆಗಳು ಬಂದಿವೆ. ಆದರೆ, ಇಲ್ಲಿ ಯಾರೂ ಕೂಡ ಪ್ರಕರಣದ ಬಗ್ಗೆ ದೂರು ನೀಡಲು ಯಾವುದೇ ಕರೆಗಳು ಮಾಡಿಲ್ಲ ಎಂಬುದು ಗಮನಾರ್ಹ. ಹಾಗಾದ್ರೆ ಯಾಕೆ ಬಂತು ಇಷ್ಟೊಂದು ಕರೆ?

ಆ ಸಹಾಯವಾಣಿಗೆ ಬಂದ ನೂರಾರು ಕರೆಗಳಲ್ಲಿ ಅವರೆಲ್ಲಾ ಕೇಳಿದ ಪ್ರಶ್ನೆ ಒಂದೇ. ಅದು “ಶವ ಸಿಕ್ಕಿತೇ?”, “ಪಾಯಿಂಟ್ ನಂಬರ್ 7ರಲ್ಲಿ ಏನಾದರೂ ಸಿಕ್ಕಿತೇ?”, ಪಾಯಿಂಟ್ ನಂಬರ್ 6ರ”ಶವಗಳು ಯಾರದ್ದಾಗಿರಬಹುದು?” ಎಂಬಿತ್ಯಾದಿ ಕುತೂಹಲಭರಿತ ಕರೆಗಳು ಬರುತ್ತಿವೆ ಎಂದು ವರದಿ ಹೇಳಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪದಡಿ SIT ತನಿಖೆ ನಡೆಸುತ್ತಿದೆ. ಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯ ನಡೆಯುತ್ತಿದೆ. ಮೊನ್ನೆ ಈ ಕೇಸ್‌ಗೆ ಸಂಬಂಧಿಸಿದಂತೆ ಜನರಿಂದ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಒಂದು ಜನರಿಗೆ ದೂರು ನೀಡುವ ಸಲುವಾಗಿ ಸಹಾಯವಾಣಿ (Helpline) ಸಂಖ್ಯೆ 0824-2005301 ಅನ್ನು ತೆರೆದಿತ್ತು. ಇದಕ್ಕೆ ದಿನ ನೂರಾರು ಕರೆ ಬರುತ್ತಿದೆ. ಆದರೆ ಇದ್ಯಾವುದು ಕೇಸ್ ಸಂಬಂಧಪಟ್ಟ ಬಗ್ಗೆ ದೂರು ನೀಡಲು ಅಲ್ಲ ಎಂಬುದೇ ವಿಶೇಷ.

ಇದನ್ನೂ ಓದಿ: Nagamma: ರಾಜಕುಮಾರ್ ಸಹೋದರಿ ನಾಗಮ್ಮ ನಿಧನ !! ಕೊನೆಗೂ ತಿಳಿಯಲಿಲ್ಲ ‘ಅಪ್ಪು’ ಸಾವಿನ ಸುದ್ದಿ

Comments are closed.