Dharmasthala Case: ಪಾಯಿಂಟ್ ನಂ.1 ರಲ್ಲಿ ಸಿಕ್ಕ ಡೆಬಿಟ್, ಪಾನ್‌ಕಾರ್ಡ್ ರಹಸ್ಯ ಬಯಲು

Dharmasthala Case: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಯಿಂಟ್ ನಂಬರ್ 6 ರಲ್ಲಿ ದೊರಕಿದ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ.

ಪಾಯಿಂಟ್ ನಂಬರ್ ಒನ್‌ನಲ್ಲಿ ಅಗೆತ ಶುರು ಮಾಡಿದಾಗ ಡೆಬಿಟ್ ಹಾಗೂ ಪಾನ್ ಕಾರ್ಡ್ ಪತ್ತೆಯಾಗಿತ್ತು. ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಿಸುದಾರರ ಸಾವು ಎಂಬ ಮಾಹಿತಿ ದೊರಕಿತ್ತು. ಆ ಡೆಬಿಟ್ ಕಾರ್ಡ್ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಎಂಬ ಮಾಹಿತಿ ಲಭಿಸಿದೆ.
ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದು, ಎಸ್‌ಐಟಿ ಅಧಿಕಾರಿಗಳು ಮಹಿಳೆಯನ್ನು ಸಂಪರ್ಕ ಮಾಡಿದ್ದು, ಡೆಬಿಟ್ ಕಾರ್ಡ್ ಬಳಕೆದಾರರ ಕುರಿತು ಮಾಹಿತಿಯನ್ನು ಖಚಿತ ಮಾಡಿದೆ.
Comments are closed.