Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಪಾಯಿಂಟ್‌ ನಂ.1 ರಲ್ಲಿ ದೊರೆತ ಡೆಬಿಟ್‌, ಪಾನ್‌ಕಾರ್ಡ್‌ ವಾರಸುದಾರರು ಪತ್ತೆ

Share the Article

Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಪಾಯಿಂಟ್‌ ಮಾಡಿದ ನಂ.1 ನಲ್ಲಿ ಸಿಕ್ಕ ಡೆಬಿಟ್‌, ಪ್ಯಾನ್‌ ಕಾರ್ಡ್‌ನ ವಾರಸುದಾರರ ವಿಳಾಸ ಪತ್ತೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ನಿವಾಸಿಯಾಗಿದ್ದ ಸುರೇಶ್‌ ಎಂಬಾತನದ್ದು ಅನ್ನೋದು ಎಂದು ವರದಿಯಾಗಿದೆ.

ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬುವವರ ಪುತ್ರ ಸುರೇಶ್‌ ಪರ್ಸ್‌ನಲ್ಲಿ ಎರಡು ಪ್ಯಾನ್‌ ಕಾರ್ಡ್‌ಗಳು ಪತ್ತೆಯಾಗಿತ್ತು. ಒಂದು ಸುರೇಶ್‌ ಪ್ಯಾನ್‌ ಕಾರ್ಡ್‌, ಇನ್ನೊಂದು ಅವರ ತಾಯಿ ಲಕ್ಷ್ಮಮ್ಮ ಅವರ ಪ್ಯಾನ್‌ ಕಾರ್ಡ್‌. ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್‌ ಆಗ ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದ್ದು, ಮಾರ್ಚ್‌ ತಿಂಗಳಲ್ಲಿ ಜಾಂಡಿಸ್‌ನಿಂದ ಸಾವಿಗೀಡಾಗಿದ್ದ. ಸಿದ್ದಲಕ್ಷ್ಮಮ್ಮ ಜೀವಂತ ಇದ್ದು, ಈ ಕುರಿತು ಪಬ್ಲಿಕ್‌ ಟಿವಿ ಮಾಧ್ಯಮಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಕುರಿತು ವರದಿಯಾಗಿದೆ.

ಸುರೇಶ್‌ ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ. ಅಲ್ಲಿ ಮಿಸ್‌ ಆಗಿರಬೇಕು. ತಾಯಿ ಎಟಿಎಂ ಕಾರ್ಡ್‌ ಕಳೆದ ಹೋಗಿದೆ ಎಂದು ಹೇಳಿದ್ದ. ನಂತರ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್‌ ತೆಗೆದುಕೊಂಡಿದ್ದರು. ಅನಾರೋಗ್ಯದಿಂದ ಸುರೇಶ್‌ ಬಳಲುತ್ತಿದ್ದು, ಐದು ತಿಂಗಳ ಹಿಂದೆ ಇಲ್ಲೇ ಮೃತಪಟ್ಟಿದ್ದರು. ಧರ್ಮಸ್ಥಳದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುರೇಶ್‌ ಅವರ ಅಕ್ಕ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: Cam Com Technologies: ಭಾರತದ ಕ್ಯಾಮ್ ಕಾಮ್ ಟೆಕ್ನಾಲಜೀಸ್ ನಿಂದ, ವಿಮಾವಲಯದಲ್ಲಿ ಜಾಗತಿಕ ಎಐ ನಿಯೋಜನೆಯಲ್ಲಿ ERGO ಗ್ರೂಪ್ ಎಜಿ ಜೊತೆ ಕಾರ್ಯತಂತ್ರದ ಪಾಲುದಾರಿಕೆ ಘೋಷಣೆ!

Comments are closed.