Rahul Gandhi: ಲೋಕಸಭೆಯಲ್ಲಿ ಬಾಯಿತಪ್ಪಿ ‘F’ ಪದ ಬಳಿಸಿದ ರಾಹುಲ್ ಗಾಂಧಿ !!

Share the Article

Rahul Gandhi : ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಾಯ್ತಪ್ಪಿನಿಂದ ‘F’ ಪದ ಬಳಕೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಲೋಕಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಂಧರ್ಭ ‘ಏನಾಯಿತು ಅಂದರೆ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಭಾರತ ಸರ್ಕಾರ ಅಂದುಕೊಂಡಿತ್ತು. ಬಳಿಕ ಯುದ್ಧಕ್ಕಿಳಿದಾಗ ಹಠಾತ್ ಆಗಿ ಪಾಕಿಸ್ತಾನ ವಿರುದ್ಧ ಮಾತ್ರವಲ್ಲದೇ ಚೀನಾ ವಿರುದ್ಧವೂ ಹೋರಾಡುತ್ತಿದ್ದೇವೆ ಎಂಬುದು ಮನವರಿಕೆಯಾಯಿತು’ ಎಂದು ಹೇಳಿದ್ದಾರೆ.

‘ಫೈಟಿಂಗ್ ಪಾಕಿಸ್ತಾನ’ ಎಂಬ ಪದ ಬಳಕೆ ಮಾಡುವಾಗ ರಾಹುಲ್ ಅವರಿಂದ ಬಾಯ್ತಪ್ಪಿನಿಂದ ‘F’ ಪದ ಬಳಕೆಯಾಗಿದೆ. ಕೂಡಲೇ ಪದ ಬಳಕೆಯನ್ನು ಸರಿಪಡಿಸಿದ್ದಾರೆ.

ಇದನ್ನೂ ಓದಿ: Actor Darshan: ನಟ ದರ್ಶನ್‌ ಅಭಿಮಾನಿಗಳ ಬೆದರಿಕೆ ಪ್ರಕರಣ – ಪ್ರಥಮ್ ದೂರಿನ್ವಯ ಎಫ್ ಐಆರ್ ದಾಖಲು

Comments are closed.