Dharmasthala: ಧರ್ಮಸ್ಥಳ : ಪುತ್ತೂರು ಎಸಿ ಒಪ್ಪಿದಲ್ಲಿ ಏಕಕಾಲದಲ್ಲಿ ಮೂರು ಸಮಾಧಿಗಳ ಉತ್ಪನನ ಸಾಧ್ಯತೆ?!

Share the Article

Dharmasthala: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದೀಗ ಸಮಾಧಿ ಉತ್ಪನನ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಏಕಕಾ ಲದಲ್ಲಿ ಎರಡಕ್ಕಿಂತ ಹೆಚ್ಚು ಸಮಾಧಿಗಳನ್ನು ಅಗೆಯಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಯೋಜನೆ ರೂಪಿಸಿದೆ.

ಆದರೆ, ಈ ಯೋಜನೆಗೆ ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗೀಸ್ ಅವರ ಅನುಮತಿಯೇ ಅಂತಿಮವಾಗಿದೆ ಎನ್ನಲಾಗಿದೆ. ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಅವರ ನಿರ್ಧಾರದ ಮೇಲೆ ಎಸ್‌ಐಟಿಯ ಉತ್ಪನನ ಕಾರ್ಯಾಚರಣೆಯ ವೇಗ ನಿರ್ಧಾರವಾಗಲಿದೆ.

ಒಂದು ವೇಳೆ ಒಂದೇ ಸಮಯದಲ್ಲಿ ಮೂರು ಸಮಾಧಿಗಳನ್ನು ಅಗೆಯಲು ಅನುಮತಿ ದೊರೆತರೆ, ಕಾರ್ಯಾಚರಣೆಗೆ ವೇಗ ಸಿಗಲಿದೆ. ಆದರೆ, ಅನುಮತಿ ನಿರಾಕರಿಸಿದರೆ, ಇಂದಿನ ಕಾರ್ಯಾಚರಣೆ ಕೇವಲ ಒಂದು ಸಮಾಧಿಗೆ ಸೀಮಿತವಾಗಲಿದೆ.

ಎಸ್‌ಐಟಿ ತಂಡವು ಈ ಬಗ್ಗೆ ಪುತ್ತೂರು ಎಸಿ ಅವರೊಂದಿಗೆ ಚರ್ಚೆ ನಡೆಸಲಿದ್ದು, ಕೆಲವೇ ಕ್ಷಣಗಳಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗುವುದು.

ಇದನ್ನೂ ಓದಿ: Rahul Gandhi: ಲೋಕಸಭೆಯಲ್ಲಿ ಬಾಯಿತಪ್ಪಿ ‘F’ ಪದ ಬಳಿಸಿದ ರಾಹುಲ್ ಗಾಂಧಿ !!

Comments are closed.