UP: ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ಆದ ಎಡವಟ್ಟು – ಮಾಡದ ತಪ್ಪಿಗೆ 17 ವರ್ಷ ಶಿಕ್ಷೆ !!

Share the Article

UP: ಪೊಲೀಸ್ ಇಲಾಖೆ ಮಾಡಿದ ಒಂದು ಎಡವಟ್ಟಿನಿಂದ ಒಂದೂವರೆ ದಶಕಕ್ಕೂ ಹೆಚ್ಚು ಓರ್ವ ವ್ಯಕ್ತಿ ಕಾನೂನು ಹೋರಾಟ ಮಾಡಿದ್ದು, ಪೊಲೀಸ್ ಇಲಾಖೆಯ ದಾಖಲೆಯಲ್ಲಿ ಒಂದು ಅಕ್ಷರದ ತಪ್ಪು (Spelling Error) ಒಬ್ಬ ವ್ಯಕ್ತಿಗೆ 17 ವರ್ಷಗಳ ಶಿಕ್ಷೆ ಅನುಭವಿಸುವಂತೆ ಮಾಡಿದೆ.

ಹೌದು, ಹೆಸರು ಬರೆಯುವ ವೇಳೆ ಒಂದೇ ಒಂದು ಸ್ಪೆಲ್ಲಿಂಗ್ ಮಿಸ್ ಆದ ಕಾರಣ ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿಯ 55 ವರ್ಷ ರಾಜವೀರ್ ಸಿಂಗ್ ಯಾದವ್ (Rajveer Singh Yadav ) ಎಂಬಾತನ ಸಾಕಷ್ಟು ನೋವುಗಳನ್ನು ಅನುಭವಿಸುವಂತಾಗಿದೆ. ಹೆಸರಿನ ಕೇವಲ ಒಂದಕ್ಷರ ಬದಲಾದ ಕಾರಣ, 22 ದಿನ ಜೈಲು ವಾಸ ಹಾಗೂ 17 ವರ್ಷಗಳ ಕಾನೂನು ಹೋರಾಟ ಮುಗಿಸಿ ಇದೀಗ ಖುಲಾಸೆಯಾಗಿದ್ದಾನೆ.

ಏನಿದು ಪ್ರಕರಣ?

2008ರಲ್ಲಿ ಮೈನ್‌ಪುರಿ ಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಗ್ಯಾಂಗ್‌ ಚಾರ್ಟ್‌ ತಯಾರಿಸುವಾಗ ರಾಮವೀರ್‌ ಬದಲು ರಾಜವೀರ್‌ ಎಂದು ಪೊಲೀಸರು ಬರೆದಿದ್ದರು. ಹೀಗಾಗಿ ತಮ್ಮನ ಬದಲಿಗೆ ಅಣ್ಣನಾದ ರಾಜವೀರ್‌ ಬಂಧನಕ್ಕೊಳಗಾದರು.“ನಾನು ಅವನಲ್ಲ’ ಎಂದು ಕೋರ್ಟ್‌ ಮುಂದೆ ಕೆಲವೇ ದಿನಗಳಲ್ಲಿ ರಾಜವೀರ್‌ ಸಾಬೀತುಗೊಳಿಸಿದರೂ, ಅವರ ಹೆಸ ರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದ್ದ ರಿಂದ ಸುದೀರ್ಘ‌ ಕಾನೂನು ಹೋರಾಟ ನಡೆಸಬೇಕಾಯಿತು.

ಇನ್ಸ್‌ಪೆಕ್ಟರ್ ಓಂಪ್ರಕಾಶ್, ವಿಚಾರಣೆಯಲ್ಲಿ ಹೆಸರಿನ ತಪ್ಪನ್ನು ಒಪ್ಪಿಕೊಂಡರೂ, ತನಿಖಾಧಿಕಾರಿಗಳು ರಾಜವೀರ್ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದರು. 2012ರಲ್ಲಿ ಪ್ರಕರಣ ವಿಚಾರಣೆಗೆ ಒಳಪಟ್ಟಿತು. ನಂತರದ 13 ವರ್ಷಗಳಲ್ಲಿ, ರಾಜವೀರ್ ನಿರಂತರವಾಗಿ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಿ, ತಾನು ತಪ್ಪಾಗಿ ಆರೋಪಿಯಾಗಿರುವುದನ್ನು ಸಾಬೀತುಪಡಿಸಲು ಶ್ರಮಿಸಿದ.

ಶನಿವಾರದ ತೀರ್ಪಿನಲ್ಲಿ, ADJ ಸ್ವಪನದೀಪ್ ಸಿಂಗಲ್ ಅವರ ನ್ಯಾಯಾಲಯವು ಪೊಲೀಸರ “ಗಂಭೀರ ನಿರ್ಲಕ್ಷ್ಯ”ವನ್ನು ಖಂಡಿಸಿತು. ತಪ್ಪು ಬೆಳಕಿಗೆ ಬಂದ ನಂತರವೂ ಪೊಲೀಸರು ನ್ಯಾಯಾಲಯದ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ತೀರ್ಪು ತಿಳಿಸಿತು. ಜೊತೆಗೆ, ಈ ತಪ್ಪಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ. ಈ ಘಟನೆಯು ನಿರಪರಾಧಿಯೊಬ್ಬನ ಜೀವನವನ್ನು ಒಂದು ತಪ್ಪು ಹೇಗೆ ಹಾಳುಗೆಡವಬಹುದು ಎಂಬುದನ್ನು ಎತ್ತಿ ತೋರಿಸಿದೆ. ರಾಜವೀರ್‌ಗೆ ನ್ಯಾಯ ದೊರೆತರೂ, ಕಳೆದ 17 ವರ್ಷಗಳ ಕಾನೂನು ಹೋರಾಟದಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವೇ ಎಂಬ ಪ್ರಶ್ನೆ ಉಳಿದಿದೆ.

ಇದನ್ನೂ ಓದಿ: Lok Kalyan: ಲೋಕ ಕಲ್ಯಾಣಕ್ಕಾಗಿ ಸತತ ಐದು ದಿನಗಳಿಂದ ಮರವನ್ನೇರಿ‌ ಕುಳಿತ ಸ್ವಾಮೀಜಿ – ಅವಧೂತ ಸ್ವಾಮೀಜಿಯ ಕಠಿಣ ಅನುಷ್ಠಾನ

Comments are closed.